ಹುಬ್ಬಳ್ಳಿ: 30 ವರ್ಷಗಳಲ್ಲಿ 6 ಚುನಾವಣೆ ಎದುರಿಸಿದ್ದೇನೆ. ಎಂದಿಗೂ ಮತದಾರರಿಗೆ ದುಡ್ಡು ಹಂಚಿಲ್ಲ ಎಂದು ಹು-ಧಾ ಸೆಂಟ್ರಲ್ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಈ ಚುನಾವಣೆಯಲ್ಲಿ ನಾನು ಲೆಕ್ಕಾಚಾರ ಮಾಡಿದ್ದಕ್ಕಿಂತ ದ್ವಿಗುಣ ಬೆಂಬಲ ಸಿಕ್ಕಿದೆ, ನಮ್ಮ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಣ ಹಂಚಿರುವುದು ನನಗೆ ನೋವುಂಟು ಮಾಡಿದೆ ಎಂದು ತಿಳಿಸಿದರು. ಕ್ಷೇತ್ರದ ಸ್ಲಂ ಭಾಗಗಳಲ್ಲಿ 500, 1000 ದುಡ್ಡು ಹಂಚಿದ್ದಾರೆ, ಮುಖ್ಯಮಂತ್ರಿಗೆ ವಿಲ್ ಪವರ್ ಮುಖ್ಯ, ಕೆಲಸ ಮಾಡದ ಸಿಎಂ ಯಾಕಿರಬೇಕು? ಬೊಮ್ಮಾಯಿಗೆ ಸ್ವಯಂ ತೀರ್ಮಾನ ಶಕ್ತಿ ಇಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ವಿರುದ್ಧ ಮಾತನಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದೆ ನಾನು ಸಚಿವ ಆಗಬೇಕೆಂದು ಕಾಂಗ್ರೆಸ್ ಸೇರಿಲ್ಲ. ಬಿಜೆಪಿಯವರು ಮೋಸ ಮಾಡಿದ್ದಕ್ಕೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದೇನೆ ಎಂದು ಅಭಿಪ್ರಾಯಪಟ್ಟರು.
ಆರು ಚುನಾವಣೆಗಿಂದ ಈ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ಆರಿಸಿ ಬರುತ್ತೇನೆ. ನಾನು ಕಾಂಗ್ರೆಸ್ ಸೇರಿದ ಮೇಲೆ ಬಿಜೆಪಿ ಚಿಂತೆಗೀಡಾಗಿದೆ. ಷಡ್ಯಂತ್ರ, ಕುತಂತ್ರದಿಂದ ಜಗದೀಶ್ ಶೆಟ್ಟರ್ ಸೋಲಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ನನ್ನ ಗುರಿ ಏಳನೇ ಬಾರಿ ಆರಸಿ ಬಂದು ಹುಬ್ಬಳ್ಳಿ ಅಭಿವೃದ್ಧಿ ಮಾಡಬೇಕು. ಜನರಿಂದ ಅತೀ ಹೆಚ್ಚು ಬೆಂಬಲ ನೀಡುತ್ತಿದ್ದಾರೆ. ಈ ಬಾರಿ ಅತೀ ಹೆಚ್ಚು ಲೀಡ್ ನಿಂದ ಗೆಲ್ಲುತ್ತೇನೆ. ಕೆಲವರು ನಾನು ಸೋಲುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದರು.