ಹುಬ್ಬಳ್ಳಿ : 40 ವರ್ಷಕ್ಕೂ ಅಧಿಕ ಕಾಲ ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ಕೊಡದೆ ಮೋಸ ಮಾಡಲಾಗಿದೆ, ಬಿಜೆಪಿ ವಿಶ್ವಾಸದ್ರೋಹ ಮಾಡಿದೆ ಎಂದು ಜಗದೀಶ್ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಕಣ್ಣೀರು ಹಾಕಿದ್ದಾರೆ.
ಶಿಲ್ಪಾ ಶೆಟ್ಟರ್ ಕಣ್ಣೀರು ಹಾಕೋದನ್ನು ನೋಡಿದ ಮಹಿಳೆಯರು ನಾವು ನಿಮ್ಮ ಪರವಾಗಿದ್ದೇವೆ ಎಂದು ಸಾಂತ್ವನ ಹೇಳಿದರು. ಬಿಜೆಪಿ ಟಿಕೆಟ್ ಕೊಡುವ ವಿಶ್ವಾಸವಿದೆ ಎಂದು ಹೇಳುತ್ತಿದ್ದ ಜಗದೀಶ್ ಶೆಟ್ಟರ್‌ಗೆ ದೊಡ್ಡ ಆಘಾತ ನೀಡಿದೆ, ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಿರುವ ಬಿಜೆಪಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಟಿಕೆಟ್ ಕೊಡದ್ದಕ್ಕೆ ನೊಂದ ಶೆಟ್ಟರ್ ಬಿಜೆಪಿ ಬಿಟ್ಟು ಕೈ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕಳೆದೊಂದು ವಾರದಿಂದ ಬಿಜೆಪಿ ಟಿಕೆಟ್‌ಗಾಗಿ ದೆಹಲಿ, ಬೆಂಗಳೂರು ಎಲ್ಲೆಡೆ ಸುತ್ತಾಡಿದರೂ ಬಿಜೆಪಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಡಲಿಲ್ಲ ಎಂದು ನೊಂದಿದ್ದಾರೆ. ಇದೇ ವಿಚಾರವಾಗಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ನಾನು ಅಧಿಕಾರಕ್ಕಾಗಿ ಪಕ್ಷ ಬದಲಾಯಿಸಿಲ್ಲ, ನಾನು ಕ್ಲಿಯರ್ ಆಗಿ ಹೇಳಿದ್ದೇನೆ. ರಾಜ್ಯದಲ್ಲಿ ನನಗೆ ಬಿಜೆಪಿ ಟಿಕೆಟ್ ತಪ್ಪೋಕೆ ಕಾರಣ ಏನು? ಎಂದು ಯಾರೂ ಹೇಳಿಲ್ಲ ಎಂದರು.