ಬೆಂಗಳೂರು: ಬಿಜೆಪಿಗೆ ಹಿಂತಿರುಗುವ ಪ್ರಶ್ನೆಯೇ ಇಲ್ಲ, ನಾನು ಕಾಂಗ್ರೆಸ್‌ನಲ್ಲಿಯೇ ಇದ್ದು ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತೇನೆ ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿಗೆ ಪರ್ಯಾಯವನ್ನು ನೀಡಲು ಕಾಂಗ್ರೆಸ್ ಸಮರ್ಥವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬಂದಿರುವುದು ಜನತೆಗೆ ಖುಷಿ ತಂದಿದೆ. ಅದೃಷ್ಟವಶಾತ್ ನಮ್ಮಲ್ಲಿ ಸ್ಥಿರ ಸರಕಾರವಿದ್ದು, ಜನರು ಇದರಿಂದ ಸಂತಸಗೊಂಡಿದ್ದಾರೆ ಎಂದ ಅವರು, ಸರಕಾರ ರಚನೆ ಪ್ರಕ್ರಿಯೆ ಸುಗಮವಾಗಲಿ ಎಂದು ಆಶಿಸಿದರು.
ನನ್ನನ್ನು ಟಾರ್ಗೆಟ್ ಮಾಡಿದ್ದರಿಂದ ಬಿಜೆಪಿಗೆ ಸೋಲಾಗಿದೆ ಎಂದು ಶೆಟ್ಟರ್ ಹೇಳಿದ್ದರು.ಅ ಷ್ಟೇ ಅಲ್ಲದೇ ಡಾ.ಜಿ ಪರಮೇಶ್ವರ್ ಸೇರಿದಂತೆ ಸಾಕಷ್ಟು ಜನರು ನನ್ನನ್ನು ಭೇಟಿ ಮಾಡಿ ಮಾತನಾಡಿ ಹೋಗಿದ್ದಾರೆ. ನೀವು ಪಕ್ಷಕ್ಕೆ ಬಂದ ಮೇಲೆ ಒಳ್ಳೆಯದಾಗಿದೆ ಎಂದಿದ್ದಾರೆ ಎಂದು ಹೇಳಿದ್ದಾರೆ, ನಾನು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬಂದ ಮೇಲೆ ಲಿಂಗಾಯತ ಮತಗಳು ಕಾಂಗ್ರೆಸ್ ಗೆ ಬಂದಿದೆ. ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಂಪ್ಯಾಕ್ಟ್ ಆಗಿದೆ ಎಂದು ಹಾರೈಸಿದ್ದರು ಎಂದು ಶೆಟ್ಟರ್ ಹೇಳಿದ್ದರು.