ಮೈಸೂರು: ಸಿದ್ದರಾಮಯ್ಯನವ್ರು ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ರೀತಿ ಆಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯಸಭಾ ಸದಸ್ಯ ಜಗ್ಗೇಶ್ ವಾಗ್ದಾಳಿ ಮಾಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪ್ರಾಣಿ ಬಲಿ ಕೊಡುವಾಗ ಕಿರುಚುವ ಪರಿಸ್ಥಿತಿ ಸಿದ್ದರಾಮಯ್ಯರದ್ದು ಸಿದ್ದರಾಮಯ್ಯ ಅವರಿಗೆ ಅಲ್ಲೂ ಜಾಗ ಇಲ್ಲ, ಇಲ್ಲೂ ಜಾಗ ಇಲ್ಲ. ಸಿದ್ದರಾಮಯ್ಯ ಹಳೇ ಸಿನಿಮಾ ಇದ್ದಂತೆ, ಮೋದಿ ಹೊಸ ಸಿನಿಮಾ ಸಿದ್ದರಾಮಯ್ಯಗೆ ನಿಮಗೆ ಒಂದು ಸರಿಯಾದ ಕ್ಷೇತ್ರ ಇಲ್ಲ. ಇಲ್ಲಿಂದ ಅಲ್ಲಿಗೆ ಓಡಿ ಹೋಗುತ್ತೀರಿ, ಅಲ್ಲಿಂದ ಇಲ್ಲಿಗೆ ಬರುತ್ತೀರಿ ಎದು ವ್ಯಂಗ್ಯವಾಡಿದರು.
ಇದು ನಮ್ಮ ಗುಣವನ್ನು ನಾವೇ ಪ್ರದರ್ಶನ ಮಾಡಿ ಮರ್ಯಾದೆ ಕಳೆದುಕೊಳ್ಳುವುದು ಅಂದರೇ ಇದುವೆ ಎಂದರು.ಜನರಿಗೆ ಸಿದ್ದರಾಮಯ್ಯಅವರನ್ನು ನೋಡಿ ಸಾಕಾಗಿದೆ. ಜನರೇ ಬದಲಾವಣೆ ಬಯಸುತ್ತಿದ್ದಾರೆ,ಈಗ ಹುಣಸೂರು ಗ್ರಾಮಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಗ್ರಾಮಗಳಿಗೆ ಕುಡಿಯುವ ನೀರು ಬಂದಿದ್ದು ಮೋದಿಯಿಂದ ಎಂದು ಅಭಿಪ್ರಾಯಪಟ್ಟರು.
ದರಿದ್ರ ಪಾಕಿಸ್ತಾನ ದೇಶ ಮಗ್ಗಲು ಮುಳ್ಳಾಗಿದೆ. ಮತ್ತೊಂದು ಕಡೆ ಚೀನಾ ಇದೆ, ಎಲ್ಲವನ್ನೂ ಮೋದಿ ನಿಭಾಯಿಸುತ್ತಿದ್ದಾರೆ. ಇಲ್ಲಿ ಮಾತನಾಡುವ ಸಿದ್ದರಾಮಯ್ಯ ಬಾರ್ಡರ್ಗೆ ಹೋಗಿ ಮಾತನಾಡಲಿ ಎಂದು ಹೇಳಿದ್ದಾರೆ.