ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿರುವ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹಲವರಿಗೆ ಆಘಾತ ತಂದಿದ್ದು, ನಟ, ರಾಜ್ಯಸಭೆ ಸದಸ್ಯರೂ ಆಗಿರುವ ಜಗ್ಗೇಶ್ ಬಿಜೆಪಿ ಸೋಲಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಕೊಟ್ಟ ಕುದುರೆ ಏರದವ, ವೀರನು ಅಲ್ಲಾ ಶೂರನು ಅಲ್ಲಾ’ ಎಂದಿದ್ದಾರೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್. ಆ ಮೂಲಕ ಕೊಟ್ಟ ಅಧಿಕಾರವನ್ನು ರಾಜ್ಯ ಬಿಜೆಪಿ ನಾಯಕರು, ಸಚಿವರುಗಳು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.
‘ಧನ್ಯವಾದ ಹಗಲಿರುಳು ಶ್ರಮಿಸಿದ ಭಾಜಪ ಸೈನಿಕರಿಗೆ, ಸೋಲು ಮುಂದಿನ ಗೆಲುವಿಗೆ ಸೋಪಾನ, ಹಗಲಾದಮೇಲೆ ಇರುಳು, ಮತ್ತೆ ಮೂಡುವುದು ಹಗಲು, ಇದು ಪ್ರಕೃತಿ ನಿಯಮ’ ಎನ್ನುವ ಮೂಲಕ ಬಿಜೆಪಿ ಕಾರ್ಯಕರ್ತರಲ್ಲಿ ಸ್ಥೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.