Wednesday, May 31, 2023
spot_img
- Advertisement -spot_img

ಮಳೆಯ ಅವಾಂತರದಿಂದ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಕಾರು ಮುಳುಗಡೆ

ಬೆಂಗಳೂರು: ಧಾರಾಕಾರವಾಗಿ ಸುರಿದ ಮಳೆಗೆ ರಾಜ್ಯಸಭಾ ಸದಸ್ಯ ಮತ್ತು ನಟ ಜಗ್ಗೇಶ್ ಅವರ ಕಾರು ಮುಳುಗಡೆಯಾಗಿದೆ. ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ BMW5 ಕಾರು ನೀರಿನಲ್ಲಿ ಮುಳುಗಡೆಯಾಗಿದ್ದು, ಕಾರಿನ ರಿಪೇರಿ ಕೆಲಸ ಇದ್ದಿದ್ದರಿಂದ ಜಗ್ಗೇಶ್ ತಮ್ಮ ಐಷಾರಾಮಿ ಕಾರನ್ನು ತಮ್ಮ ಸ್ನೇಹಿತನ ಮನೆಯಲ್ಲಿ ಬಿಟ್ಟಿದ್ದರು. ಮಳೆ ನೀರು ಸ್ನೇಹಿತ ವಾಸವಾಗಿರುವ ಮನೆಯ ಸೆಲ್ಲರ್ ನಲ್ಲಿ ನುಗ್ಗಿದ್ದರಿಂದ ಅವರ ಕಾರು ಸಂಪೂರ್ಣವಾಗಿ ಮುಳುಗಡೆಯಾಗಿದೆ. ನಿನ್ನೆ ಮಳೆಯ ಅವಾಂತರದಿಂದ ಘಟನೆಯನ್ನು ಜಗ್ಗೇಶ್ ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಾದ್ಯಂತ ನಿನ್ನೆ ಮಳೆಯಾಗಿದ್ದು, ಹಲವರಿಗೆ ಸಮಸ್ಯೆಯುಂಟು ಮಾಡಿದೆ. ಕೆಲವೊಂದು ಪ್ರದೇಶದಲ್ಲಿ ಮನೆಯೊಳಗಡೆ ನೀರು ನುಗ್ಗಿಜನ ಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆಗಳಲ್ಲಿ ಮರ ಬಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿದೆ.

Related Articles

- Advertisement -

Latest Articles