Monday, March 20, 2023
spot_img
- Advertisement -spot_img

ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಕೈ ಬಿಜೆಪಿ ಬಿಡೋದಿಲ್ಲ : ಸಚಿವ ಶ್ರೀರಾಮುಲು


ಹುಬ್ಬಳ್ಳಿ : ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಪಕ್ಷ ಆರಂಭಿಸುತ್ತಾರೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ ಬಿಜೆಪಿ ಕೈ ಬಿಡುವುದಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ಜನಾರ್ದನ ರೆಡ್ಡಿಯವರೊಂದಿಗೆ ಸ್ನೇಹ ಕಳೆದುಕೊಳ್ಳುವುದಿಲ್ಲ, ಪಕ್ಷ ರಾಜಕೀಯ ಸ್ಥಾನ ಮಾನ ನೀಡಿದೆ, ಪಕ್ಷದ ನಾಯಕರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು. ಜನಾರ್ದನ ರೆಡ್ಡಿ ಸಾರ್ವಜನಿಕರ ಬದುಕಲ್ಲಿ ಬರಬೇಕು ಎಂದಷ್ಟೇ ಹೇಳಿದ್ದಾರೆ, ಹೊರತು ಪಕ್ಷ ಮೀರಿ ಪಕ್ಷಕ್ಕೆ ತೊಂದರೆ ನೀಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಯಲ್ಲಿ ಇರ್ತಾರೆ, ಅವರನ್ನು ಬಳಸಿಕೊಂಡು ನಾವು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದ್ದರು.ರೆಡ್ಡಿ ಗಂಗಾವತಿಯಲ್ಲಿ ಮನೆ ಮಾಡಿರುವುದರಿಂದ ಗೊಂದಲ ಉಂಟಾಗಿರಬಹುದು. ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬುದನ್ನು ಪಕ್ಷ ನಿರ್ಧರಿಸಲಿದೆ. ಅವರ ಮೇಲೆ ಕೆಲವೊಂದು ಕೇಸ್‌ಗಳಿರುವುದರಿಂದ ಬಿಜೆಪಿಯಲ್ಲಿ ಮತ್ತೆ ಸಕ್ರಿಯವಾಗಿ ಪಾಲ್ಗೊಳ್ಳುವುದು ವಿಳಂಬವಾಗಿದೆ.

ವರಿಷ್ಠರ ಜತೆ ಮಾತನಾಡಿ, ಅವರನ್ನು ಪಕ್ಷಕ್ಕೆ ಕರೆದುಕೊಳ್ಳಲಾಗುವುದು ಎಂದಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ರೆಡ್ಡಿ ಹಿಡಿತ ಸಾಧಿಸಲು ರೆಡ್ಡಿ ತಂತ್ರ ಸಿದ್ಧ ಮಾಡಿಕೊಂಡಿದ್ದಾರೆ ಜೊತೆಗೆ ಗಂಗಾವತಿಯಿಂದ ರಾಜಕೀಯದ 2ನೇ ಇನ್ನಿಂಗ್ಸ್‌ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ.

ಇದೇ ತಿಂಗಳು ರಾಜಕೀಯ ನಡೆಯಬಗ್ಗೆ ಪೂರ್ತಿಯಾಗಿ ತಿಳಿಸುತ್ತೇನೆ ಎಂದಿದ್ದಾರೆ. ರೆಡ್ಡಿ ಹೊಸ ಪಕ್ಷ ಕಟ್ತಾರಾ ಅನ್ನೋ ಪ್ರಶ್ನೆ ಕಾಡ್ತಿದ್ದು, ಸದ್ಯದಲ್ಲೇ ಎಲ್ಲದಕ್ಕೂ ಉತ್ತರ ಸಿಗಲಿದೆ.

Related Articles

- Advertisement -

Latest Articles