ನವದೆಹಲಿ : ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಜೊತೆ ‘ಚಂಪಾರಣ್ ಮಟನ್’ ರೆಸಿಪಿ ತಯಾರಿಸಿದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರ ಸಂಬೀತ್ ಪಾತ್ರ, ಹಿಂದೂಗಳು ಕಟ್ಟು ನಿಟ್ಟಾಗಿ ಸಸ್ಯಾಹಾರವನ್ನು ಸೇವನೆ ಮಾಡುವ ಸಾವನ್ (ಶ್ರಾವಣ) ಮಾಸದಲ್ಲಿ ಕುರಿ ಮಾಂಸ ಬೇಯಿಸಿ ತಿನ್ನುವ ಮೂಲಕ ರಾಹುಲ್ ಗಾಂಧಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಸಾವನ್ ಅಂತ್ಯಗೊಂಡ ನಂತರ, ಸೆಪ್ಟೆಂಬರ್ 2ರಂದು ವಿಡಿಯೋ ಬಿಡುಗಡೆ ಮಾಡಲಾಗಿದ್ದರೂ, ಅದನ್ನು ಸಾವನ್ ಮಾಸ ಚಾಲ್ತಿಯಲ್ಲಿದ್ದ ಆಗಸ್ಟ್‌ನಲ್ಲಿ ಶೂಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.
‘ಓಹ್, ಜನಿವಾರಧಾರಿ ಬ್ರಾಹ್ಮಣನ ನಾಟಕ’..ರಾಹುಲ್ ಗಾಂಧಿ ಆಗಸ್ಟ್ 4ರಂದು ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿಯಾಗಿ ಮಾಂಸಾಹಾರದ ಅಡುಗೆ ಮಾಡಿದ್ದಾರೆ. ಆದರೆ, ಸಾವನ್ ಮಾಸ ಅಂತ್ಯಗೊಳ್ಳುವವರೆಗೆ ಕಾದು ತಮ್ಮ ಪಾಕಶಾಲೆಯ ಕೌಶಲ್ಯಗಳನ್ನು ತೋರಿಸುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸಾವನ್ ಮುಗಿದ ತಕ್ಷಣ ವಿಡಿಯೋ ಹೇಗೆ ಹೊರಬಂತು ಎಂದು ಸಂಬೀತ್ ಪಾತ್ರ ಪ್ರಶ್ನಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.