ಬಾಗಲಕೋಟೆ : ಸುಳ್ಳು ಹೇಳುವ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿ, ಈ ಸಂಕಲ್ಪ ಯಾತ್ರೆಯ ಸಂಕಲ್ಪ ಏನೆಂದರೆ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸಬೇಕು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರನ್ನು ಮನೆಗೆ ಕಳುಹಿಸಬೇಕು ಎಂದು ಕಿಡಿಕಾರಿದರು.
ವಿಜಯಾನಂದ್ ಕಾಶಪ್ಪನವರ್ ಬೇರೆ ಜಾತಿಯವರಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಅವರು ಗೋಕಾಕ್ ಮತ್ತು ಹುಕ್ಕೇರಿಯಲ್ಲಿ ಬಂದು, ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹಾಗಾಗಿ ವಿಜಯಾನಂದ್ ಕಾಶಪ್ಪನವರ್ ಅವರನ್ನು ಸೋಲಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಪಕ್ಷ ಬೂತ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಹೊಂದಿರುವ ಪಕ್ಷವಾಗಿದ್ದು, ಪಕ್ಷದ ಧ್ಯೇಯಗಳನ್ನು ಪ್ರತಿಪಾದಿಸಿ ರಾಷ್ಟ್ರಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲಾಗ್ತಿದೆ, ಮೊದಿಯವರ ಬಗ್ಗೆ ವಿನಾಕಾರಣ ಅರೋಪ ಮಾಡೋದು ತಪ್ಪು, ಮೋದಿಯವರಿಂದ ದೇಶ ಅಭಿವೃದ್ಧಿಯೆಡೆಗೆ ಸಾಗ್ತಾ ಇದೆ ಎಂದು ಅಭಿಪ್ರಾಯಪಟ್ಟರು.