ಬೆಳಗಾವಿ: ಹುದ್ದೆ ದೊಡ್ಡದಲ್ಲ. ಹೀಗಾಗಿ ಸಪೋರ್ಟ್ ಮಾಡಬೇಕಾಗುತ್ತದೆ. ಒಂದೊಂದು ಸಾರಿ ಏನೋ ತಪ್ಪಿರಬಹುದು. ನಾವೆಲ್ಲರೂ ನಿಮ್ಮ ಜೊತೆಗೆ ಇರುತ್ತೇವೆ ಕೆಲಸ ಮಾಡಿ ಅಂತಾ ಹೇಳಬೇಕಾಗುತ್ತದೆ. ಆ ಸಂದರ್ಭದಲ್ಲಿ ಆ ರೀತಿ ಡಾ.ಜಿ.ಪರಮೇಶ್ವರ ಹೇಳಿರಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ ಒದ್ದಾಡುತ್ತಿದ್ದಾರೆ ಎಂಬ ಡಾ.ಜಿ.ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಡಿಕೆಶಿ ಆ್ಯಕ್ಟಿವ್ ಇದ್ದಾರೆ, ಸಾಕಷ್ಟು ಕೆಲಸ ಮಾಡಿದ್ದಾರೆ. ರಾತ್ರಿ ಹಗಲು ಪಕ್ಷಕ್ಕಾಗಿ ಡಿಕೆಶಿ ಕೆಲಸವನ್ನು ಮಾಡುತ್ತಿದ್ದು, ಕೆಲವೊಂದು ಸಾರಿ ಲೆಕ್ಕಾಚಾರಗಳು ತಪ್ಪಾಗುತ್ತದೆ ಎಂದರು.
ಕೆಲವು ಸಂದರ್ಭದಲ್ಲಿ ಎಲ್ಲವೂ ನನಗೆ ಅನುಭವ ಇರಲ್ಲ. ಕೆಲವು ಕೇಳಬೇಕಾಗುತ್ತೆ ಅದು ಅನಿವಾರ್ಯ ಇರುತ್ತದೆ. ಡಿಕೆಶಿ ಆ್ಯಕ್ಟೀವ್ ಇದ್ದಾರೆ. ಸಾಕಷ್ಟು ಕೆಲಸ ಮಾಡಿದ್ದಾರೆ. ರಾತ್ರಿ ಹಗಲು ಪಕ್ಷಕ್ಕಾಗಿ ಡಿಕೆಶಿ ಕೆಲಸ ಮಾಡ್ತಿದ್ದಾರೆ. ಸುಮಾರು ಕಾರ್ಯಕ್ರಮ ಮಾಡಿದ್ದಾರೆ. ಕೆಲವೊಮ್ಮೆ ಲೆಕ್ಕಾಚಾರ ತಪ್ಪಿರುತ್ತದೆ. ಅದೇ ಎಲ್ಲದಕ್ಕೂ ಹಿನ್ನಡೆ ಅಂತಾ ಹೇಳಕ್ಕಾಗಲ್ಲ ಎಂದು ಹೇಳಿದರು. ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶವು ಕನ್ನಡಿ ಥರ ಸ್ಪಷ್ಟವಾಗಿದ್ದು, ಆಮ್ ಆದ್ಮಿಯಿಂದ ಬಹಳಷ್ಟು ಸೀಟ್ ನಾವು ಕಳೆದುಕೊಂಡಿದ್ದೇವೆ ಎಂದು ಹೇಳಿದರು.