ಬೆಂಗಳೂರು: ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಎಂದು ಮಾಜಿ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಕೆಂಗೇರಿಯಲ್ಲಿ ಇಂದು ನಡೆದ ಪಕ್ಷದ ಸಭೆಯಲ್ಲಿ ಘೋಷಿಸಲಾಯಿತು.
ಈ ವೇಳೆ ಜವರಾಯಿಗೌಡ ಮಾತನಾಡಿ, ನಿಮ್ಮ ಒತ್ತಾಯದ ಮೇರೆಗೆ ನಿಲ್ಲುತ್ತಿದ್ದೇನೆ. ಈ ಬಾರಿ ಜೆಡಿಎಸ್ ಗೆಲ್ಲಬೇಕು ಎಂದು ಪಣ ತೊಡಲಾಗಿದೆ ಎಂದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಯಶವಂತಪುರ ಕ್ಷೇತ್ರವು ಇಂದಿಗೂ ಜೆಡಿಎಸ್‌ನ ಭದ್ರಕೋಟೆ ಜವರಾಯಿಗೌಡ ಅವರಿಗೆ ಚುನಾವಣೆ ಹೇಗೆ ನಡೆಸಬೇಕು ಎಂದು ಗೊತ್ತಾಗದ ಕಾರಣಕ್ಕಾಗಿ ಒಂದಿಷ್ಟು ಹಿನ್ನಡೆಯಾಯಿತು.
ಯಶವಂತಪುರ ಕ್ಷೇತ್ರದಿಂದ ಈ ಹಿಂದೆಯೂ ಜವರಾಯಿಗೌಡ ಅವರು ಸ್ಪರ್ಧಿಸಿದ್ದರು. ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದರು ಎಂದರು.ಕಾರ್ಯಕರ್ತರು ದೇವರು ಇದ್ದಂತೆ. ಜನರ ಅಭಿಮಾನ ಎಷ್ಟಿದೆ ನೋಡು. ಯಾರಿಗೂ ದುಡ್ಡು ಕೊಟ್ಟು ಕಾರ್ಯಕ್ರಮ ಮಾಡಿ ಎಂದು ಹೇಳಿಲ್ಲ.
ಕಾರ್ಯಕರ್ತರೇ ಸೇರಿ ಮಾಡಿದ ಕಾರ್ಯಕ್ರಮ ಇದು ಎಂದು ಕುಮಾರಸ್ವಾಮಿ ಹೇಳಿದಾಗ, ಜವರಾಯಿಗೌಡ ಅವರು ಕಣ್ಣೀರಿಟ್ಟರು. ಕಾರ್ಯಾಗಾರ ನಡೆಸಿದ ಬಳಿಕ ಬಹಳ ಬದಲಾಗಿದೆ. ಈಗಾಗಲೇ 93 ಕ್ಷೇತ್ರಗಳ ಅಭ್ಯರ್ಥಿ ಘೋಷಣೆಯಾಗಿದೆ. 61 ಕ್ಷೇತ್ರಗಳಲ್ಲಿ ಮತಯಾತ್ರೆ ಮುಗಿಸಲಾಗಿದೆ ಎಂದು ತಿಳಿಸಿದರು.