ಮೈಸೂರು: ಎರಡು ಬಾರಿ ನೀವು ನನ್ನನ್ನು ಗೆಲ್ಲಿಸಿದ್ದೀರಿ, 3ನೇ ಬಾರಿಗೆ ನನಗೆ ಮತ ನೀಡಿ. ಮಾತ್ರವಲ್ಲದೆ, ಮೈಸೂರಿನ ಎಲ್ಲ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ , ಹೆಚ್ ಡಿಕೆಯವರನ್ನು ಮತ್ತೆ ಸಿಎಂ ಮಾಡಿ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಮನವಿ ಮಾಡಿದರು.
ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದ ಜನ ಏನೆಂದು ಹಿಂದೆಯೇ ತೋರಿಸಿದ್ದೀರಿ. ಜೆಡಿಎಸ್ ಸಮಾವೇಶದಲ್ಲಿ ಒಂದು ಲಕ್ಷ ಜನ ಸೇರುವ ಮೂಲಕ ಪಕ್ಷ ಟೀಕಿಸಿದವರಿಗೆ ಉತ್ತರ ನೀಡಿದಂತಿದೆ ಎಂದರು. ನಿಮ್ಮ ಮತ ವಜ್ರದ ಹಾರ. ನೀವು ಹಾಕುವ ಒಂದೊಂದು ಮತ ಹೆಚ್.ಡಿ ದೇವೇಗೌಡರಿಗೆ ವಜ್ರದ ಹಾರದ ಹಾಗೆ. ನಿಖಿಲ್ ಕುಮಾರಸ್ವಾಮಿ, ಹರೀಶ್ ಗೌಡ ಲವ-ಕುಶ, ರಾಮ-ಲಕ್ಷ್ಮಣ ಇದ್ದಂತೆ ಎಂದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಜಿ.ಟಿ.ದೇವೇಗೌಡರಿಗೆ ಕಾಂಗ್ರೆಸ್ ನಾಯಕರು ಹಾಕಿದ್ದ ಸವಾಲಿಗೆ ನೀವೆಲ್ಲ ಉತ್ತರ ನೀಡಿದ್ದೀರಿ. 123 ಸ್ಥಾನ ಗೆಲ್ಲುವ ಗುರಿಯನ್ನು ಹೊಂದಿದ್ದೇವೆ ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಕುಟುಂಬದಲ್ಲಿ ಯಾವುದೇ ಗೊಂದಲವಿಲ್ಲ. ಟಿಕೆಟ್ ಹಂಚಿಕೆಯಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಿರಲಿದೆ ಎಂದರು.