ತುಮಕೂರು : ಕೊಟ್ಟ ಮಾತಿನಂತೆ ನುಡಿದಿರುವ ಸರ್ಕಾರ ಅಂದ್ರೆ ಅದು ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಮಾತಿನಂತೆ ನಡೆದು ಕೊಂಡಿದೆ ಎಂದು ಮಾಜಿ ಸಚಿವ ವೆಂಕಟರಮಣಪ್ಪ ಹೇಳಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವೆಂಕಟರಮಣಪ್ಪ, ಜೆಡಿಎಸ್ ನವರು ಕೇವಲ ನಾಲ್ಕು ಸೀಟ್ ಗಾಗಿ ಬಿಜೆಪಿ ಅವರ ಬಳಿ ಭಿಕ್ಷೆ ಬೇಡೋಕೆ ಹೋಗಿದ್ದಾರೆ, ಇದು ಜೆಡಿಎಸ್ ಗೆ ನಾಚಿಕೆಗೇಡುತನ. 224 ಸೀಟ್ ಗೆಲ್ತಿವಿ, ನಾವೇ ಸರ್ಕಾರ ರಚನೆ ಮಾಡ್ತಿವಿ ಅಂತ 19 ಸೀಟ್ ಗೆದ್ರು. ಹಿಂದೆ ಬಿಜೆಪಿ ಅವರಿಗೆ ಟೋಫಿ ಹಾಕಿ 18 ತಿಂಗಳು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ರು, ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲೆ ಕಾಲ ಕಳೆದರು. ಈಗ ಪಾವಗಡದಲ್ಲಿ ಕುರಿಗಳ ವ್ಯಾಪಾರ ಮಾಡಿದಂತೆ ಅವರ ಪಕ್ಷದ ಶಾಸಕರನ್ನು ವ್ಯಾಪಾರ ಮಾಡಲಾಗಿದೆ. ಅವರಿಬ್ಬರು ಒಂದಾಗಿ ಏನು ಮಾಡೋಕೆ ಆಗಲ್ಲ ಎಂದು ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ : ‘ಸನಾತನ ವಿರುದ್ಧ ಹೋರಾಡಲು ‘I.N.D.I.A’ ಒಕ್ಕೂಟ ರಚಿಸಲಾಗಿದೆ’
ಮುಂದುವರೆದು ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಬರೀ 40% ದುಡ್ಡು ತಗೋಳೋದು ಬಿಟ್ರೆ, ಅಭಿವೃದ್ಧಿ ಕೆಲಸಗಳನ್ನ ಮಾಡಲಿಲ್ಲ. ಅದಕ್ಕೆ ಈ ಬಾರಿ ಆದ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಇಷ್ಟಾದರೂ, ಯಡಿಯೂರಪ್ಪ ರಾಜ್ಯಾದ್ಯಂತ ಭ್ರಷ್ಟಾಚಾರದ ಬಗ್ಗೆ ಪ್ರಚಾರ ಮಾಡ್ತಿನಿ ಅಂತಾರೆ. ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರದ ವಿಚಾರದಿಂದ ಯಾರಾದ್ರು ಮುಖ್ಯಮಂತ್ರಿ ಜೈಲಿಗೆ ಹೋಗಿದ್ದಾರೆ ಎಂದಾದರೆ ಅದು ಯಡಿಯೂರಪ್ಪ ಒಬ್ರೆ; ಅವರ ಕ್ಯಾಬಿನೆಟ್ ನಲ್ಲಿ ಎಲ್ಲಾ ಮಂತ್ರಿಗಳು ಜೈಲಿಗೆ ಹೋಗಿದ್ದಾರೆ.ಕಾಂಗ್ರೆಸ್ ಸರ್ಕಾರದಲ್ಲಿ ಯಾವ ಮಂತ್ರಿಗಳು ಹೋಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಕೆಐಎಎಲ್ ಟರ್ಮಿನಲ್-2: ಇಂದಿನಿಂದ ಅಧಿಕೃತ ವಿಮಾನಗಳ ಹಾರಾಟ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿಚಾರ ಪ್ರಸ್ತಾಪಿಸಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಾವು 5 ಜನ ಬೆಂಬಲ ಕೊಟ್ಟು ಸರ್ಕಾರ ರಚನೆ ಮಾಡಿದ್ವಿ. ಎರಡೇ ವರ್ಷದಲ್ಲಿ ಒಬ್ಬೊಬ್ಬರನ್ನ ತೆಗೆದ್ರು, ನಮಗೆ ನಂಬಿಸಿ ಮೋಸ ಮಾಡಿದ್ರು; ಮೋಸ ಮಾಡಿ ಜೈಲಿಗೆ ಹೋದ್ರು. ಕಮಲಾ ಆಪರೇಷನ್ ಮಾಡಿದ್ದೆ ಯಡಿಯೂರಪ್ಪ, ಇವರು ಬರೀ ಹಿಂದಿನ ಬಾಗಿಲಿನಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಹೊರತು, ಜೀವಮಾನದಲ್ಲಿ ಮುಂದಿನ ಬಾಗಿಲಲ್ಲಿ ಅಧಿಕಾರಕ್ಕೆ ಬಂದಿಲ್ಲ. ಇವರಿಗೆ ಕಾಂಗ್ರೆಸ್ ಬಗ್ಗೆ ಮಾತಾಡೋ ನೈತಿಕ ಹಕ್ಕು ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.