Monday, March 27, 2023
spot_img
- Advertisement -spot_img

ಮೂರು ತಿಂಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ನಿಮ್ಮ ಸಮಸ್ಯೆ ಪರಿಹಾರ ಮಾಡ್ತೇನೆ

ಆಳಂದ: ನಿಮ್ಮ ಸಮಸ್ಯೆಗಳಿಗೆ ಮೂರು ತಿಂಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಸಾಲಮನ್ನಾ ಸೇರಿ ಎಲ್ಲ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. ತಾಲೂಕಿನ ಖಜೂರಿ ಗ್ರಾಮದಲ್ಲಿ ರೈತರ ಅಳಲಿಗೆ ಸ್ಪಂದಿಸಿ ಮಾತನಾಡಿದರು.ಬರುವ ಮೂರು ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆಯ ಬಳಿಕ ನಾನೇ ಮುಖ್ಯಮಂತ್ರಿಯಾಗಲಿದ್ದು, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಧಿಕಾರದಲ್ಲಿದ್ದಾಗ ತಾವು ಮಾಡಿದ ರೈತ ಸಾಲಮನ್ನಾ ಈ ಸರ್ಕಾರ ಪೂರ್ಣವಾಗಿ ಜಾರಿಗೆ ತರದೆ, ಸಾಕಷ್ಟುಕಡೆ ಸಮಸ್ಯೆ ಮಾಡಿದ್ದಾರೆ. ಸಾಲದ 95ರ ಫಾರಂ ತಿರಸ್ಕೃತವಾದರೆ ಸಂಬಂಧಿತ ಅಧಿಕಾರಿಗಳ ಮಧ್ಯಸ್ಥಿಕೆ ವಹಿಸಿ ಕ್ರಮ ಕೈಗೊಳ್ಳಬೇಕಿತ್ತು. ಅಧಿಕಾರದಲ್ಲಿ 500 ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಅದನ್ನು ರಾಜ್ಯ ಸರ್ಕಾರ ಸಾಲಮನ್ನಾಕ್ಕೆ ಬಳಕೆ ಮಾಡದೆ ಬೇರೆ ಕಡೆ ವರ್ಗಾಯಿಸಿದೆ ಎಂದು ದೂರಿದರು.

ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಮೋಸ ಕಂಪನಿಯಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದರೆ ಮುಂದೆ ರೈತರಿಗೆ ಸರ್ಕಾರದಿಂದಲೇ ಬೆಳೆ ವಿಮೆ ಜಾರಿಗೆ ತರುತ್ತೇನೆ. ರಾಜ್ಯದ ರೈತರ, ಕಾರ್ಮಿಕರು ಬಡವರ ದೀನ ದರ್ಬಲರ ಸಮಸ್ಯೆ ಪರಿಹಾರ ತರಲು ಜೆಡಿಎಸ್‌ ಅಧಿಕಾರಕ್ಕೆ ಬರಬೇಕಿದೆ.

ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಮತ ನೀಡಿ, ಜನಾಪೇಕ್ಷೆಯಂತೆಯೇ ಪಂಚರತ್ನ ರಥಯಾತ್ರೆ ರೂಪಿಸಿದ್ದೆವು. ಇದಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಗಳು ಅಭಿವೃದ್ಧಿಗಿಂತ ತೆರಿಗೆ ಹಣ ಲೂಟಿ ಮಾಡಿದ್ದರ ಬಗ್ಗೆ ಜನ ಚರ್ಚೆ ಮಾಡ್ತಿದ್ದಾರೆ ಎಂದು ರಾಷ್ಟ್ರೀಯ ಪಕ್ಷಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

Related Articles

- Advertisement -

Latest Articles