ಚಿಕ್ಕಬಳ್ಳಾಫುರ : ಇಲ್ಲಿನ ಬೈರಗಾನಹಳ್ಳಿ ಗ್ರಾಮದ ಬಳಿ ಜೆಡಿಎಸ್ ಮುಖಂಡ ನಾರಾಯಣಸ್ವಾಮಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನಾರಾಯಣಸ್ವಾಮಿ ಶಿಡ್ಲಘಟ್ಟ ಪಟ್ಟಣದಿಂದ ತನ್ನ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಇಂದು (ಆಗಸ್ಟ್ 24) ಸಂಜೆ ಈ ಘಟನೆ ನಡೆದಿದೆ. ನಾರಾಯಣಸ್ವಾಮಿ ಕೊಲೆಯಾದ ಸ್ಥಳದಲ್ಲೇ ರಸ್ತೆ ಬದಿ ಅವರು ಸಂಚರಿಸುತ್ತಿದ್ದ ಓಮ್ನಿ ಕಾರು ಪತ್ತೆಯಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ನಾರಾಯಣಸ್ವಾಮಿ, ಜೆಡಿಎಸ್ ಪಕ್ಷ ಹಾಗೂ ದಲಿತ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಹಳೆ ದ್ವೇಷದ ಹಿನ್ನಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಫುರ ಎಸ್ಪಿ ಡಿ.ಎಲ್. ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.