Tuesday, March 28, 2023
spot_img
- Advertisement -spot_img

ಕುಮಾರಣ್ಣ ಜೆಡಿಎಸ್ ವಿಸರ್ಜನೆ ಮಾಡ್ತಾರಂತೆ, ಬನ್ನಿ ಕಾಂಗ್ರೆಸ್ ಸೇರ್ಕೋಳ್ಳಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬೆಂಗಳೂರು: ನೋಡ್ರಪ್ಪ ಕುಮಾರಣ್ಣ ಜೆಡಿಎಸ್ ವಿಸರ್ಜನೆ ಮಾಡ್ತೇನೆ ಎಂದು ಹೇಳ್ತಾ ಇದ್ದಾರೆ. ಈಗಲೇ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಹ್ವಾನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ, ಈ ಬಾರಿ ಸೋತರೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಣ್ಣ ಹೇಳ್ತಾ ಇದ್ದಾರೆ ಅದಕ್ಕೆ ಈಗಲೇ ಬಂದು ಜೆಡಿಎಸ್‍ನವರೆಲ್ಲಾ ಕಾಂಗ್ರೆಸ್ ಸೇರಿಕೊಳ್ಳಿ ಎಂದರು.

ನನಗೆ ವಿಸರ್ಜನೆ ಪದ ಗೊತ್ತಿಲ್ಲ, ನನಗೆ ಅಧಿಕಾರ ಸಿಗಲಿಲ್ಲ ಅಂದ್ರೆ ವಿಸರ್ಜನೆ ಮಾಡ್ತೇನೆ ಎಂದು ಅವರು ಹೇಳಿದ್ರು. ವಿಸರ್ಜನೆ ಮಾಡುವ ಕಾಲ ಅವರಿಗೆ. ಜೆಡಿಎಸ್‍ನವರು ನಮ್ಮ ಪಾರ್ಟಿಗೆ ಸೇರುತ್ತಿದ್ದಾರೆ. ಮಂಡ್ಯ, ಕನಕಪುರದಲ್ಲಿ ಸೇರುತ್ತಿದ್ದಾರೆ. ಅವರೇ ವಿಸರ್ಜನೆ ಮಾಡ್ತೇನೆ ಎಂದಾಗ, ಕಾರ್ಯಕರ್ತರು ಕಷ್ಟ ಪಟ್ಟು ಪಾರ್ಟಿ ಉಳಿಸಿಕೊಂಡಿರುತ್ತಾರೆ. ಯಾಕೆ ಹಾಳು ಮಾಡಬೇಕು ಬನ್ನಿ ನಾನು ಇದ್ದೀನಿ ಎಂದು ಕರೆದಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ನಾವೇನು ಅಸ್ತ್ರ ಹೂಡುವ ಅವಶ್ಯಕತೆ ಇಲ್ಲ. ಜನ ಈ ಸರ್ಕಾರ ತೆಗೆಯಬೇಕೆಂದು ತೀರ್ಮಾನ ಮಾಡಿದ್ದಾರೆ. ದಿನ ಜಾಹೀರಾತು ನೀಡ್ತಿದಾರೆ. ಕಳೆದ ಬಾರಿಯ ಬಜೆಟ್ ಜಾರಿಗೆ ಬಂದಿದ್ಯಾ?, ಯಾವುದಾದ್ರು ಈಡೇರಿಸಿದ್ದಾರಾ? ಹಿಂದೆ ಕೊಟ್ಟ ಮಾತು ಈಡೇರಿದ್ಯಾ, ಜನಕ್ಕೆ ಮುಟ್ಟಿದ್ಯಾ? ಬರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದಿದ್ದಾರೆ.

Related Articles

- Advertisement -

Latest Articles