ಮಂಡ್ಯ : ಕಾಂಗ್ರೆಸ್ ನವರು ರೈತರನ್ನು ಸಂಪೂರ್ಣವಾಗಿ ಸಮಾಧಿ ಮಾಡುತ್ತಾರೆ. ಕಾವೇರಿ ನಮ್ಮೆಲ್ಲ ತಾಯಿ, ಬದುಕಲು ಕಾವೇರಿ ನೀರು ಬೇಕು. ರಾಜ್ಯ ಸರ್ಕಾರ ತಕ್ಷಣವೇ ತಮಿಳುನಾಡಿಗೆ ನೀರು ನಿಲ್ಲಿಸಬೇಕು ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಬಹಳ ವರ್ಷಗಳ ಅನುಭವ ಇದೆ. ನಿಮ್ಮ ಗೌರವ ಉಳಿದುಕೊಳ್ಳಬೇಕಾದರೆ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸಿ. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಆವರಿಸಿದೆ. ಇದನೆಲ್ಲ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತಂದ್ರಾ? ಎಂದು ಕಿಡಿ ಕಾರಿದರು.
ಇದನ್ನೂ ಓದಿ : ನಟ ಸುದೀಪ್ ಬರ್ತ್ ಡೇ : ಶುಭ ಕೋರಿದ ರಾಜಕೀಯ ಗಣ್ಯರು
ಪ್ರಾಧಿಕಾರದ ಮುಂದೆ ಇವರು ಯಾರು ಹೋಗಿಲ್ಲ. ಸರ್ಕಾರ ಬಂದು ಮೂರು ತಿಂಗಳು ಆಗಿದೆ. ಬೆಂಗಳೂರಿನವರಿಗೆ ನೀರಿಲ್ಲ, ಅಲ್ಲಿ ಯಾವ ಹೋರಾಟವೂ ಇಲ್ಲ. ನೀವೆಲ್ಲರು ನೀರು ಇಲ್ಲದೆ ಉಳಿಯುತ್ತಿರಾ? ರೈತರ ಹೋರಾಟಕ್ಕೆ ಬನ್ನಿ, ಸರ್ಕಾರ ಬರೀ ಗ್ಯಾರಂಟಿ ಗುಂಗಲ್ಲಿ ಇದೆ ಎಂದು ಟೀಕಿಸಿದರು.
ಒಂದು ಹನಿ ನೀರು ಕೂಡ ತಮಿಳುನಾಡಿಗೆ ಬಿಡಬಾರದು. ಕಾಂಗ್ರೆಸ್ ಸರ್ಕಾರ ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ನ್ಯಾಯ ದೇವತೆ ಒಪ್ಪುತ್ತಾಳಾ? ಕೂಡಲೇ ಪ್ರಾಧಿಕಾರದ ಮುಂದೆ ಹೋಗಿ ಸಂಕಷ್ಟ ಸೂತ್ರ ಅನುಸರಿಸಿದ್ದಿರಾ? ಇನ್ನೂ ಇಲ್ಲಿ ಬರಗಾಲ ಘೋಷಣೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ, ಗ್ಯಾರಂಟಿ ಎಂಬ ಯೋಚನೆಯಲ್ಲಿರುವ ಈ ರಾಜ್ಯಸರ್ಕಾರದಿಂದ ತಮಿಳುನಾಡಿನಂತೆ ಒಗ್ಗಟ್ಟು ಪ್ರದರ್ಶನ ಏಕೆ ಸಾಧ್ಯವಿಲ್ಲ ಎಂದು ದೇವೇಗೌಡ ಜರಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.