ಹಾಸನ: ಅರಸೀಕೆರೆಯ ಹಾಲಿ ಶಾಸಕ ಜೆಡಿಎಸ್ ನ ಶಿವಲಿಂಗೇಗೌಡ ಕಾಂಗ್ರೆಸ್ ಸೇರಲು ನಿರ್ಧಾರ ಮಾಡಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಗೊಂದಲ ಸೃಷ್ಟಿಯಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಸೇರ್ಪಡೆಯಾಗುವುದಕ್ಕೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ.
ಮಾ.05 ರಂದು ಸಿದ್ದರಾಮಯ್ಯ ಅರಸಿಕೆರೆಗೆ ಭೇಟಿ ನೀಡುತ್ತಿದ್ದು, ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಉದ್ಘಾಟಿಸಲಿದ್ದಾರೆ. ಅಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಶಿವಲಿಂಗೇಗೌಡ ಕಾಂಗ್ರೆಸ್ ಗೆ ಸೆರ್ಪಡೆಯಾದರೆ, 2023 ರ ಚುನಾವಣೆಯಲ್ಲಿ ಸಾಮೂಹಿಕವಾಗಿ ಬೆಂಬಲಿಸುವುದಾಗಿ ಬೆಂಬಲಿಗರು ಘೋಷಿಸಿದ್ದಾರೆ. ವಿಪಕ್ಷ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶಿವಲಿಂಗೇ ಗೌಡ ಕಾಂಗ್ರೆಸ್ ಸೇರಲಿದ್ದಾರೆ.
ನಾನು ಕಾಂಗ್ರೆಸ್ ಸೇರಲು ಪ್ರಮುಖ ಕಾರಣ ಅಂದ್ರೆ ಪಕ್ಷದಲ್ಲಿ ಸಾಕಷ್ಟು ನೋವನ್ನ ಅನುಭವಿಸಿದ್ದೇನೆ. ಹಾಗಂತ ನಾನು ಅವರನ್ನ ಟೀಕಿಸುತ್ತಿಲ್ಲ ಜೆಡಿಎಸ್ ಪಕ್ಷವನ್ನು ಕಟ್ಟಬೇಕಾದರೆ, 15 ರಿಂದ 20 ಸಾವಿರ ಮತದಾರರಿಂದ ಕ್ಷೇತ್ರವನ್ನು ಇವತ್ತು 90 ಸಾವಿರ ಮತದಾರರ ತನಕ ಕೊಂಡೊಯ್ದಿದ್ದೇವೆ ಎಂದರೆ ಅದು ಸುಲಭದ ಮಾತಲ್ಲ ಎಂದು ಶಿವಲಿಂಗೇಗೌಡ ಅಭಿಪ್ರಾಯಪಟ್ಟಿದ್ದಾರೆ.