Monday, December 4, 2023
spot_img
- Advertisement -spot_img

ಮತಬೇಟೆ ವೇಳೆ ಕುಸಿದು ಬಿದ್ದ ನಾಯಕಿ ಕೆ.ಕವಿತಾ!

ಗದ್ವಾಲ್/ತೆಲಂಗಾಣ: ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ.ಕವಿತಾ ಇಲ್ಲಿನ ಇಟಿಕ್ಯಾಲ್‌ನಲ್ಲಿ ಪ್ರಚಾರ ಕಾರ್ಯದಲ್ಲಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತೆರೆದ ವಾಹನದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿರುವಾಗ ಈ ಘಟನೆ ನಡೆದಿದೆ.

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರು ತೆರೆದ ವಾಹನದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಏಕಾಏಕಿ ಅವರು ತೆರದ ವಾಹನದ ಹಿಂಬಾಗದಲ್ಲಿ ಕುಸಿದು ಬಿದ್ದರು. ತಕ್ಷಣ ಅಲ್ಲಿದ್ದವರು ಕವಿತಾರನ್ನು ಮೇಲೆತ್ತಿ ನೀರು ನೀಡಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ನೀಡಬೇಕೇ, ಜೈಲಿನಿಂದಲೇ ಸರ್ಕಾರ ನಡೆಸಬೇಕೇ?: ಕೇಜ್ರಿವಾಲ್

ಬಳಿಕ ಅವರು ಪ್ರಚಾರದಲ್ಲಿ ಸ್ವಲ್ಪ ವಿರಾಮ ತೆಗೆಎದುಕೊಂಡು ವಿಶ್ರಾಂತಿ ಪಡೆದರು. ಈ ವೇಳೆ ವಾಹನ ಮುಂದಿದ್ದವರು ಗೊಂದಲದಿಂದ ಸ್ಥಳದಲ್ಲಿ ನೂಕು ನುಗ್ಗಲು ಏರ್ಪಟ್ಟಿತು. ಆದರೆ ಬಳಿಕ ಪರಿಸ್ಥಿತಿ ತಿಳಿಯಾಯಿತು. ಇದಾದ ಬಳಿಕ ಅವರು ಟ್ವೀಟ್ ಮಾಡಿ ಘಟನೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಆದಿತ್ಯ ಠಾಕ್ರೆ ಸೇರಿ ಇಬ್ಬರ ವಿರುದ್ಧ ದಾಖಲಾಯ್ತು ಎಫ್​ಐಆರ್!

ಸ್ವಲ್ಪ ಗೊಂದಲಕ್ಕಾಗಿ ಕ್ಷಮಿಸಿ. ನಾನು ಚೆನ್ನಾಗಿಯೇ ಇದ್ದೇನೆ, ಈ ಮುದ್ದಾದ ಹುಡುಗಿಯನ್ನು ಭೇಟಿಯಾಗಿದ್ದೇನೆ ಮತ್ತು ಅವಳೊಂದಿಗೆ ಸಮಯ ಕಳೆದ ನಂತರ ನಾನು ಸ್ವಲ್ಪ ಸುಧಾರಿಸಿಕೊಂಡಿದ್ದೇನೆ #KCROnceAgain ಅಭಿಯಾನವು ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ” ಎಂದು ಪುಟ್ಟ ಮಗುವೊಂದರ ಜೊತೆ ಮಾತನಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles