ಜನ್ಮ ದಿನಾಂಕ: 01/06/1979
ಪತ್ನಿ: ರಚನಾ ರಾಘವೇಂದ್ರ ಹಿಟ್ನಾಳ
ಹುಟ್ಟಿದ ಸ್ಥಳ: ಹಿಟ್ನಾಳ ಗ್ರಾಮ ಕೊಪ್ಪಳ ತಾಲೂಕು
ಶಿಕ್ಷಣ: ಪಿಯುಸಿ
ಬಾಲ್ಯ ಹಾಗೂ ವೃತ್ತಿ ಜೀವನ
ಕೆ.ರಾಘವೇಂದ್ರ ಹಿಟ್ನಾಳ್ ಅವರು ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಕೆ.ಬಸವರಾಜ ಹಿಟ್ನಾಳ್ ಬಸಮ್ಮ ದಂಪತಿ ಪುತ್ರರಾಗಿದ್ದಾರೆ. ಸ್ವಗ್ರಾಮವಾದ ಹಿಟ್ನಾಳ್‌ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಿಟ್ನಾಳ ಗ್ರಾಮದಲ್ಲಿ ಮುಗಿಸಿದ ಬಳಿಕ ಹಗರಿಬೊಮ್ಮನಳ್ಳಿಯ ಆರ್‌ಎಸ್‌ಎಸ್ ಶಾಲೆಯಲ್ಲಿ ಪಿಯುಸಿ ವರೆಗೆ ಓದಿದ ಬಳಿಕ ಇವರು ಓದು ಮೊಟಕುಗೊಳಿಸಿ ಕಲ್ಲು ಗಣಿಗಾರಿಕೆ ಮತ್ತು ವ್ಯವಸಾಯ ಮಾಡಲು ಆರಂಭಿಸಿದ್ದರು.
ಇದಾದ ಬಳಿಕ 2005ರಲ್ಲಿ ಅಳವಂಡಿ ಜಿ.ಪಂ ಕ್ಷೇತ್ರದಿಂದ ಸ್ಪರ್ಧಿಸಿ ಜಿ.ಪಂ ಸದಸ್ಯರಾಗಿ ಆಯ್ಕೆಯಾಗಿ ರಾಜಕೀಯ ಪ್ರವೇಶ ಮಾಡಿದ್ದರು. ಬಳಿಕ ರಚನಾ ಎಂಬುವರೊಂದಿಗೆ ವಿವಾಹವಾಗಿ, ಇವರಿಗೆ ಸುದರ್ಶನ ಮತ್ತು ವಿಜಯಲಕ್ಷ್ಮಿ ಎಂಬ ಇಬ್ಬರು ಮಕ್ಕಳಿದ್ದಾರೆ.
ಜಿಲ್ಲಾ ಪಂಚಾಯತ್‌ನ ಸದಸ್ಯರಾದ ಬಳಿಕ ಅದೇ ಅವಧಿಯಲ್ಲಿ ಜಿ.ಪಂ ಅಧ್ಯಕ್ಷರಾಗಿ ಸೇವೆಸಲ್ಲಿಸಿದ ರಾಘವೇಂದ್ರ ಹಿಟ್ನಾಳ್ ರವರು ಬಳಿಕ 2011ರಲ್ಲಿ ಜಿ.ಪಂ ಚುನಾವಣೆಯಲ್ಲಿಯೂ ಗೆದ್ದು ಮತ್ತೊಮ್ಮೆ ಜಿ.ಪಂ ಅಧ್ಯಕ್ಷರಾಗಿ ಎರಡು ಅವಧಿಯಲ್ಲಿ ಕೊಪ್ಪಳ ಜಿ.ಪಂ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ 2012ರ ವಿಧಾನಸಭಾ ಚುನಾವಣೆಗೆ ಧುಮುಕಿ ಮೊದಲ ಭಾರಿಗೆ ಶಾಸಕರಾಗಿ ಆಯ್ಕೆಯಾದರು. ಇದಾದ ಬಳಿಕ ಸತತ ಮೂರು ಬಾರಿ ಸ್ಪರ್ಧಿಸಿ ಮೂರು ಬಾರಿಯೂ ಕೊಪ್ಪಳ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ನಿರ್ವಹಿಸಿದ ಜವಾಬ್ದಾರಿಗಳು
2005-2010 ಕೊಪ್ಪಳ ಜಿಪಂ ಅಧ್ಯಕ್ಷರಾಗಿದ್ದರು.
2011-2013 ಎರಡನೇ ಅವಧಿಗೆ ಕೊಪ್ಪಳ ಜಿಪಂ ಅಧ್ಯಕ್ಷರು
2013-ಮೊದಲ ಬಾರಿಗೆ ಶಾಸಕ
2018-ಎರಡನೇ ಅವಧಿಗೆ ಶಾಸಕ
2019-ಸಂಸದೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ
2023-ಮೂರನೇ ಅವಧಿಗೆ ಶಾಸಕರಾಗಿ ಗೆಲುವು