Monday, March 20, 2023
spot_img
- Advertisement -spot_img

ಸಿದ್ದರಾಮಯ್ಯರಿಗೆ ನರೇಂದ್ರ ಮೋದಿ ಹೆಸರು ಹೇಳೋ ಯೋಗ್ಯತೆ ಇಲ್ಲ : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ರಾಯಚೂರು: ನರೇಂದ್ರ ಮೋದಿ ಇಡೀ ದೇಶವೇ ಮೆಚ್ಚಿದೆ ವಿಶ್ವನಾಯಕ. ಸೂರ್ಯ ಯಾವತ್ತಿದ್ರೂ ಸೂರ್ಯನೇ. ಸೂರ್ಯನಿಗೆ ಉಗುಳಿದ್ರೆ ವಾಪಸ್ ಮುಖಕ್ಕೆ ಬೀಳುತ್ತೆ. ಮೋದಿಯವರನ್ನ ಬೈದ್ರೆ ದೊಡ್ಡ ಲೀಡರ್ ಆಗ್ತೇನೆ ಅನ್ನೋ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ರಾಯಚೂರಿನಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯನಿಗೆ ನರೇಂದ್ರ ಮೋದಿ ಹೆಸರು ಹೇಳೋ ಯೋಗ್ಯತೆ ಇಲ್ಲ. ಆತ ಒಬ್ಬ ಅಯೋಗ್ಯ ಎಂದು ಕಿಡಿಕಾರಿದರು. ಕಾಂಗ್ರೆಸ್‌ನವರು ಬಸ್ ಯಾತ್ರೆ ಮಾಡುತ್ತಿರುವುದು ಸಂತೋಷ. ಒಂದೇ ಪೊಲಿಟಿಕಲ್ ಪಾರ್ಟಿ ಪೂರ್ಣ ಅಧಿಕಾರ ಇಟ್ಟುಕೊಂಡು ಕೂರಬಾರದು. ವಿರೋಧ ಪಕ್ಷವೂ ಇರಬೇಕು. ಇಡೀ ದೇಶದಲ್ಲಿ ವಿರೋಧಪಕ್ಷ ಎಲ್ಲಿದೆ. ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ಖರ್ಗೆ ಬಡಿದಾಡುತ್ತಾ ಕುಳಿತರೆ ಅಧಿಕಾರ ಬರುವುದಿರಲಿ ವಿರೋಧ ಪಕ್ಷವೂ ಉಳಿಯಲ್ಲ ಎಂದು ಟಾಂಗ್‌ ನೀಡಿದರು.

ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಹುಡುಕಾಡುತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತ್ರು, ಬಾದಾಮಿಯಲ್ಲಿ ಸೋಲಿನ ಭಯ ಇದೆ. ಹೀಗಾಗಿ ಕೋಲಾರಕ್ಕೆ ಬಂದಿದ್ದಾರೆ. ಅಲ್ಲಿ ನಿಲ್ತಾರೋ ಇಲ್ವೋ ಗೊತ್ತಿಲ್ಲ. ಸಿದ್ದರಾಮಯ್ಯ ಮೊದಲು ಕೋಲಾರದಲ್ಲಿ ನಿಲ್ಲಲಿ, ಗೆಲವು ಸೋಲು ಆಮೇಲೆ. ನನಗೆ ಗೊತ್ತಿಲ್ಲ ಅಂತ ಡಿ.ಕೆ.ಶಿವಕುಮಾರ್ ಹೇಳ್ತಾರೆ. ಇವರು ತಾವೇ ಕ್ಯಾಂಡಿಡೇಟ್ ಅಂತ ಡಿಕ್ಲೇರ್ ಮಾಡಿಕೊಂಡ್ರೆ ಆಗುತ್ತಾ ಎಂದು ಪ್ರಶ್ನಿಸಿದರು.

Related Articles

- Advertisement -

Latest Articles