Thursday, June 8, 2023
spot_img
- Advertisement -spot_img

ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಬಿಜೆಪಿ ಸೇರ್ಪಡೆ

ಶಿವಮೊಗ್ಗ: ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಡಾ.ರಾಜನಂದಿನಿ‌ ಬಿಜೆಪಿ‌ ಸೇರ್ಪಡೆ ಆಗಿರೋ ಸುದ್ದಿ ನನಗೆ ಈಗಷ್ಟೇ ಗೊತ್ತಾಗಿದೆ. ಡಾ.ರಾಜನಂದಿನಿ ಈ ರೀತಿ ಮಾಡುತ್ತಾರೆ ಎಂದು ನಾನು ಕನಸಿನಲ್ಲೂ ಆಲೋಚಿಸಿರಲಿಲ್ಲ ಎಂದು ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜನಂದಿನಿ ಬಿಜೆಪಿ ಸೇರಿರುವಂತಹದ್ದು ನನ್ನ ಎದೆಗೆ ಚೂರಿ ಹಾಕಿದಂತಾಗಿದೆ, ಡಾ.ರಾಜನಂದಿನಿ ಈ ಕೆಲಸ ಮಾಡಬಾರದಿತ್ತು. ಇದು ನನ್ನ ದೌರ್ಭಾಗ್ಯ ಮಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತೇನೆ ಎಂದು ಬೇಸರಿಸಿದರು.

ನಾನು ಕಾಂಗ್ರೆಸ್ ನಲ್ಲಿ ಟಿಕೆಟ್ ನೀಡದೇ ಹೋದರೆ ಬಿಜೆಪಿಗೆ ಹೋಗುತ್ತೇನೆ ಎಂದು ಹೇಳಿದ್ದೆ. ನಾನು ನಮ್ಮ ತಂದೆ ಅವರ ಬಳಿಯಲ್ಲಿಯೂ ಈ ಬಗ್ಗೆ ತಿಳಿಸಿದ್ದೆ ಎಂದು ರಾಜನಂದಿನಿ ಪ್ರತಿಕ್ರಿಯಿಸಿದರು. ಇನ್ನೂ ಸಿಎಂ ಬೊಮ್ಮಾಯಿ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ ನಲ್ಲಿ ರಾಜನಂದಿನಿ ಬಿಜೆಪಿ ಸೇರಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿಗೆ ಹಲವು ಜನರು ಸೇರುತ್ತಿರುವ ಬಗ್ಗೆ ಸಂತಸಪಟ್ಟಿದ್ದಾರೆ.

Related Articles

- Advertisement -spot_img

Latest Articles