Friday, September 29, 2023
spot_img
- Advertisement -spot_img

ಪ್ರಿಯಾಂಕ್ ಖರ್ಗೆಗೆ 5 ಸಾವಿರ ರೂ. ದಂಡ : ಸಚಿವರು ಮಾಡಿದ ತಪ್ಪೇನು?

ಕಲಬುರಗಿ : ಅನುಮತಿ ಪಡೆಯದೆ ಬ್ಯಾನರ್ ಅಳವಡಿಸಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಗೆ ನಗರ ಪಾಲಿಕೆ ಐದು ಸಾವಿರ ರೂಪಾಯಿ ದಂಡ ವಿಧಿಸಿದೆ.

ನಿನ್ನೆ (ಆಗಸ್ಟ್ 30) ಗೃಹಲಕ್ಷಿ ಯೋಜನೆಯ ಲೋಕಾರ್ಪಣೆ ಹಿನ್ನೆಲೆ ಸಚಿವ ಪ್ರಿಯಾಂಕ್ ಖರ್ಗೆಯವರ ಫೋಟೋ ಇರುವ ಬ್ಯಾನರ್ ಗಳನ್ನು ನಗರದ ಎಲ್ಲೆಡೆ ಹಾಕಲಾಗಿದೆ. ಪಾಲಿಕೆಯಿಂದ ಅನುಮತಿ ಪಡೆಯದೆ ಸಚಿವರ ಬೆಂಬಲಿಗರು ಬ್ಯಾನರ್ ಅಳವಡಿಸಿದ್ದು, ಈ ಹಿನ್ನೆಲೆ ಸಚಿವರಿಗೆ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ಪಾಲಿಕೆಯ ಕ್ರಮವನ್ನು ಬೆಂಬಲಿಸಿರುವ ಸಚಿವರು ದಂಡ ಪಾವತಿಸಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ : Digital Exclusive : ಲೋಕಸಮರಕ್ಕೆ ಸಿದ್ಧತೆ; ಇಂದು ರಾಜ್ಯ ಬಿಜೆಪಿ ಮಹತ್ವದ ಸಭೆ

ನಗರದಲ್ಲಿ ಅನಧಿಕೃತವಾಗಿ ಬ್ಯಾನರ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲ ದಿನಗಳ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಬೆಂಬಲಿಗರು ಬ್ಯಾನರ್ ಹಾಕಿದ್ದಕ್ಕೆ ಸಚಿವರೇ ದಂಡ ಪಾವತಿಸುವ ಪರಿಸ್ಥಿತಿ ಎದುರಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles