ಬಳ್ಳಾರಿ: ಲೋಕಸಭೆ ಚುನಾವಣೆಗೆ ಈ ಭಾಗದಿಂದ ಅತಿ ಹೆಚ್ಚು ಸಂಸದರನ್ನು ಆರಿಸಿ ಕಳುಹಿಸುತ್ತೇವೆ ಎಂದು ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿದರು.
CWC ಸದಸ್ಯರಾದ ಬಳಿಕ ಮೊದಲ ಬಾರಿ ಬಳ್ಳಾರಿಗೆ ಆಗಮಿಸಿದ್ದು, ಅಭಿಮಾನಿಗಳು ಭರ್ಜರಿ ಮೆರವಣಿಗೆಯೊಂದಿಗೆ ಸ್ವಾಗತಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಅತಿ ಕಿರಿಯ ವಯಸ್ಸಿನ ವ್ಯಕ್ತಿಯಾದ ನನ್ನನ್ನು ಸಿಡ್ಲ್ಯೂಸಿ ಸದಸ್ಯರನ್ನಾಗಿ ಮಾಡಿರೋದಕ್ಕೆ ಧನ್ಯವಾದಗಳು, ಸಾಮಾನ್ಯ ಕುಟುಂಬದ ಹಿನ್ನಲೆಯಿಂದ ಬಂದ ನನಗೆ ಕಾಂಗ್ರೆಸ್ ನಲ್ಲಿ ಉತ್ತಮ ಸ್ಥಾನಮಾನ ನೀಡಿದ್ದಾರೆ ಎಂದು ಸಂತಸ ಹಂಚಿಕೊಂಡರು.
ವಿಧಾನಸಭೆ ಚುನಾವಣೆ ವೇಳೆ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಏಳು ಸ್ಥಾನವನ್ನು ಗೆದ್ದಿದ್ದೇವೆ, ಲೋಕಸಭೆಯಲ್ಲಿ 28 ಕ್ಷೇತ್ರದಲ್ಲಿ ಗೆದ್ದೇ ಗೆಲ್ತೇವೆ, ಕಲ್ಯಾಣ ಕರ್ನಾಟಕ ಕಾಂಗ್ರೆಸ್ ಭದ್ರಕೋಟೆಯಾಗಿದೆ ಎಂದರು.
ಇದನ್ನೂ ಓದಿ; ‘ಗ್ಯಾರಂಟಿ ಸರ್ಕಾರ’ಕ್ಕೆ 100 ದಿನ; ಸಂತಸ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ
ಲೋಕಸಭೆ ಟಿಕೆಟ್ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಲೋಕಲ್ ನಾನ್ ಲೋಕಲ್ ಟಿಕೆಟ್ ವಿಚಾರವಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಡ್ತಾರೋ ಅವರನ್ನು ಗೆಲ್ಲಿಸುತ್ತೇವೆ. ಲೋಕಲ್ ರಿಪೋರ್ಟ್ ಕೊಡೋ ಜವಾಬ್ದಾರಿ ನನ್ನದು. ಆದ್ರೇ ಪಕ್ಷದ ತೀರ್ಮಾನವೇ ಅಂತಿಮ, ಹಿಂದೆ ವಿಧಾನಸಭೆ ಸ್ಪರ್ಧೆ ಮಾಡಲು ಹೇಳಿದ್ರು ನಂತರ ಬೇಡವೆಂದ್ರು. ಈಗ ಲೋಕಸಭೆ ಸ್ಪರ್ಧೆ ಮಾಡೋ ವಿಚಾರ ಪಕ್ಷಕ್ಕೆ ಬಿಟ್ಟದ್ದು. ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ನಿಭಾಯಿಸಲು ಸಿದ್ಧ ಎಂದು ಆಶಯ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.