ನವದೆಹಲಿ: ಭಾರತ್ ಜೋಡೋ ಯಾತ್ರೆಯು ‘ಅದ್ಭುತ ಕಲ್ಪನೆ’ ಎಂದು ಕಾಂಗ್ರೆಸ್‌ನ ಮಾಜಿ ನಾಯಕ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಶ್ಲಾಘಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಪಕ್ಷದ ಭಾರತ್ ಜೋಡೋ ಯಾತ್ರೆಯು ಯಶಸ್ವಿಯಾಗಿದೆ ಮತ್ತು ಕಾಂಗ್ರೆಸ್ಸೇತರ ಅಂಶಗಳ ಬೆಂಬಲ ಪಡೆದುಕೊಂಡಿದೆ , ರಾಹುಲ್ ಗಾಂಧಿ ಅವರು ಸಮಾಜದ ವಿಭಿನ್ನ ಅಂಶಗಳನ್ನು ಒಟ್ಟುಗೂಡಿಸಲು ಸಮರ್ಥರಾಗಿದ್ದಾರೆ ಮತ್ತು ದೇಶದಲ್ಲಿ ಏಕತೆ ಮೂಡಿಸುವುದು ಎಷ್ಟು ಮುಖ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿದ್ದಾರೆ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆಯು ಶ್ಲಾಘಿಸಲೇಬೇಕಾದ ಸಂಗತಿ. ಈಗ ಅದರ ರಾಜಕೀಯ ಪ್ರಭಾವಕ್ಕೆ ಸಂಬಂಧಿಸಿದಂತೆ, ಜನರು ಯಾತ್ರೆಯ ಹಿಂದಿನ ಪರಿಕಲ್ಪನೆಯನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಮತ್ತು ಅದನ್ನು ಶುದ್ಧ ರಾಜಕೀಯ ಕಾರ್ಯಕ್ಕೆ ಸಂಬಂಧಿಸುವಂತೆ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಅಂದಹಾಗೆ , ಸದ್ಯ ಪಂಜಾಬ್‌ನಲ್ಲಿರುವ ಭಾರತ್ ಜೋಡೋ ಯಾತ್ರೆಯು ಶ್ರೀನಗರದಲ್ಲಿ ರಾಹುಲ್ ಗಾಂಧಿ ಅವರು ರಾಷ್ಟ್ರಧ್ವಜಾರೋಹಣ ಮಾಡುವುದರೊಂದಿಗೆ ಜನವರಿ 30 ರಂದು ಕೊನೆಗೊಳ್ಳಲಿದೆ.