ಬೆಂಗಳೂರು : ಜಿ 20 ಶೃಂಗಸಭೆ ಹಿನ್ನೆಲೆ ಭಾರತದ ಪ್ರವಾಸದಲ್ಲಿರುವ ನೆದರ್ ಲ್ಯಾಂಡ್ ಪ್ರಧಾನಿ ಮಾರ್ಕ್‌ರುಟ್ಟೆಯವರು ಇಂದು ಸಿಲಿಕಾನ್ ಸಿಟಿಗೆ ಭೇಟಿ ನೀಡಿದ್ದು, ಅವರನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವ ಎಂಬಿ ಪಾಟೀಲ್ ಸೇರಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ದೆಹಲಿಯಿಂದ ಶೃಂಗಸಭೆಯ ಬಳಿಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಆಗಮಿಸಿದ ಮಾರ್ಕ್‌ರುಟ್ಟೆಯವರಿಗೆ ಹೂಗುಚ್ಚ ನೀಡಿ ಸರ್ಕಾರದ ವತಿಯಿಂದ ಬರಮಾಡಿಕೊಳ್ಳಲಾಯಿತು.
ಇದನ್ನೂ ಓದಿ : ʼನಂಜೇಗೌಡ ಮೊದಲು ಅವರ ಮೇಲಿರುವ ಹಗರಣದಿಂದ ಪಾರಾಗಲಿʼ
ಬೆಂಗಳೂರಿನಲ್ಲಿ ಹೂಡಿಕೆ ವಿಚಾರವಾಗಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಹತ್ವದ ಸಭೆ ನಡೆಸಿ, ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ಚರ್ಚೆ ನಡೆಸಲಿದ್ದಾರೆ. ಸದ್ಯ ನೆದರ್ಲ್ಯಾಂಡ್ಸ್ ಮತ್ತು ಕರ್ನಾಟಕ ನಡುವೆ ಉತ್ತಮ ಸಂಬಂಧವಿದ್ದು, ಅದನ್ನು ಮುಂದುವರೆಸುವ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ.
ಪ್ರಸ್ತುತ ರಾಜ್ಯದಲ್ಲಿ 9% ಹೂಡಿಕೆ ಮಾಡಿರುವ ನೆದರ್ಲ್ಯಾಂಡ್ಸ್ ಸರ್ಕಾರ. ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಐಟಿ ಬಿಟಿ, ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಮಧ್ಯಾಹ್ನ 1.30ರ ಬಳಿಕ ನಡೆಯಲಿರುವ ಸಭೆಯಲ್ಲಿ ರಾಜ್ಯದ ಮತ್ತು ನೆದರ್ಲ್ಯಾಂಡ್ಸ್‌ನ ವಾಣಿಜ್ಯೋದ್ಯಮಿಗಳು ಭಾಗಿಯಾಗಲಿದ್ದಾರೆ. ಉಭಯ ನಾಯಕರ ಪರಸ್ಪರ ಭೇಟಿಯ ವೇಳೆ ರಾಜ್ಯದಲ್ಲಿ ನಾನಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಚರ್ಚೆಯಾಗಲಿದೆ. ನೆದರ್ ಲ್ಯಾಂಡ್ ಮತ್ತು ಕರ್ನಾಟಕ ಸರ್ಕಾರದ ನಡುವೆ ವಾಣಿಜ್ಯ ಒಪ್ಪಂದಗಳ ಕುರಿತು ಪ್ರಮುಖ ಮಾತುಕತೆ ನಡೆಯಲಿದೆ.
ಈಗಾಗಲೇ ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಶೃಂಗಸಭೆಯಲ್ಲಿ ಭೇಟಿಯಾಗಿ ಚರ್ಚಿಸಿರುವ ಮಾರ್ಕ್‌ರುಟ್ಟೆ ಇದೀಗ ರಾಜ್ಯಕ್ಕಾಗಮಿಸಿ ಸರ್ಕಾರದೊಂದಿಗೆ ಹೂಡಿಕೆಯ ಬಗ್ಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.