ಉಡುಪಿ: ಕಾಪು ಬ್ಲಾಕ್ ಕಾಂಗ್ರೆಸ್ ನಿಂದ ಫೆ. 7ರಂದು ಕಾಪು ವಿಧಾನಸಭಾ ಕ್ಷೇತ್ರದಾದ್ಯಂತ ಕರಾವಳಿ ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಬೆಳಗ್ಗೆ 9 ಗಂಟೆಗೆ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಜಮಾಡಿಯಿಂದ ಆರಂಭಗೊಳ್ಳಲಿರುವ ಕರಾವಳಿ ಪ್ರಜಾಧ್ವನಿ ಯಾತ್ರೆಯು ಸಂಜೆ 5 ಗಂಟೆಗೆ ಹಿರಿಯಡಕದಲ್ಲಿ ಸಮಾಪನಗೊಳ್ಳಲಿದೆ. ಯಾತ್ರೆಯಲ್ಲಿ ಸುಮಾರು 200ಕ್ಕೂ ಹೆಚ್ಚಿನ ಚತುಶ್ಚಕ್ರ ವಾಹನಗಳು ಮತ್ತು ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಬಿಜೆಪಿ ಪಕ್ಷ ಹಿಂದಿನ ಎಲೆಕ್ಷನ್ ನಲ್ಲಿ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ, ರಚನಾತ್ಮಕ ಕೆಲಸಗಳೂ ನಡೆದಿಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಲ್ಲ ಭಾಗ್ಯ ನೀಡಲಾಗಿತ್ತು. ಆದರೆ ಬಿಜೆಪಿಯಿಂದ ಸುಮಾರು ಸಮಸ್ಯೆಯಾಗಿದೆ ಎಂದು ಕಿಡಿಕಾರಿದರು.
ಹೆಜಮಾಡಿ ಪೇಟೆಯಿಂದ ಆರಂಭಗೊಂಡು ಪಡುಬಿದ್ರಿ – ನಂದಿಕೂರು – ಮುದರಂಗಡಿ ಜಂಕ್ಷನ್- ಎಲ್ಲೂರು – ಬೆಳಪು – ಪಕೀರ್ಣಕಟ್ಟೆ – ಮಜೂರು – ಕುತ್ಯಾರು – ಶಿರ್ವ – ಪಾಂಬೂರು – ಬಂಟಕಲ್ಲು – ಶಂಕರಪುರ- ಸುಭಾಸ್ ನಗರ – ಕಟಪಾಡಿ – ಉದ್ಯಾವರ – ಅಲೆವೂರು – ಹಿರೇಬೆಟ್ಟು – ಆತ್ರಾಡಿ – ಕೊಡಿಬೆಟ್ಟು – ಹಿರಿಯಡಕದಲ್ಲಿ ಯಾತ್ರೆ ಸಮಾಪನಗೊಳ್ಳಲಿದೆ. ಪಡುಬಿದ್ರಿ, ಶಿರ್ವ, ಕಟಪಾಡಿ, ಉದ್ಯಾವರ, ಆತ್ರಾಡಿ, ಹಿರಿಯಡಕದಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದರು.