ಕಾರ್ಕಳ : ತುಳುನಾಡನ್ನು ರಾಜ್ಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಹಾಗೂ ಪ್ರವಾಸಿತಾಣವಾಗಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವ ಸುನಿಲ ಕುಮಾರ್ ಕಾರ್ಕಳ ಹೇಳಿದರು.
ಬೈಲೂರಿನಲ್ಲಿ ಪರಶುರಾಮ ಥೀಮ್ ಪಾರ್ಕ್ ಆವರಣದ ಬಳಿ ಥೀಮ್ ಪಾರ್ಕ್ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಪರಶುರಾಮ ಕಂಚಿನ ಪ್ರತಿಮೆ ಈಗಾಗಲೇ ಆಗಮಿಸಿದ್ದು ಮೂರು ನಾಲ್ಕು ದಿನಗಳಲ್ಲಿ ಮೂರ್ತಿ ಜೋಡಣೆ ಕಾರ್ಯ ನಡೆದು ಉದ್ಘಾಟನೆಗೆ ಸಜ್ಜುಗೊಳ್ಳಲಿದೆ.
ಕಳೆದ ಏಳು ವರ್ಷಗಳಿಂದ ಥೀಂ ಪಾರ್ಕ್ ಬಗೆಗಿನ ಮಾಹಿತಿ ಪರಿಶೀಲಿಸಿ ಎರಡು ತಿಂಗಳಲ್ಲಿ 28 ಉಪ ಸಮಿತಿ ರಚಿಸಿ ಉದ್ಘಾಟನೆಗೆ ಸಿದ್ಧವಾಗಿದೆ, ಕಾರ್ಕಳಕ್ಕೆ ಟೂರಿಸಂ ಸಕ್ರ್ಯೂಟ್ ನಿರ್ಮಾಣ ಮಾಡಲು ಪರಶುರಾಮ ಥಿಂ ಪಾರ್ಕ್ ಮುಕುಟಮಣಿಯಾಗಲಿದೆ ಎಂದರು.
ಜ.19ರಂದು ನೇಷನ್ ಫಸ್ವ್ ವತಿಯಿಂದ ಕಾರ್ಕಳ ಬಸ್ ನಿಲ್ದಾಣದಿಂದ ಪರಶುರಾಮ ಥೀಮ್ ಪಾರ್ಕ್ ವರೆಗೆ ಐತಿಹಾಸಿಕ ಪರಶುರಾಮ ದೌಡ್ ಓಟ ನಡೆಯಲಿದೆ. ಜ.24ರಂದು ವಸ್ತು ಪ್ರದರ್ಶನ, ಆಹಾರ ಮೇಳ ಹಾಗೂ ಕಾರ್ಕಳ ಕುಕ್ಕುಂದೂರಿನಿಂದ ಬೈಲೂರು ಥಿಂ ಪಾರ್ಕ್ ವರೆಗೆ ದೀಪಾಲಂಕಾರ ಉದ್ಘಾಟನೆ ನಡೆಯಲಿದೆ. 27ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಥೀಮ್ ಪಾರ್ಕ್ ಉದ್ಘಾಟನೆಯಾಗಲಿದೆ.
29ರಂದು ಸಮಾರೋಪ ಸಮಾರಂಭದ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ನಟ ರಿಷಬ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.