Wednesday, November 29, 2023
spot_img
- Advertisement -spot_img

Karnataka Bandh; ಅಂಗಡಿ ಮುಚ್ಚಿಸಿ, ಆಟೋಗಳ ತಡೆದ ಪ್ರತಿಭಟನಾಕಾರರು

ಚಿಕ್ಕಮಗಳೂರು: ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ನಗರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಆದರೆ ನಗರದ ಮುಖ್ಯ ಬಸ್ ನಿಲ್ದಾಣದಲ್ಲಿ ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸುತ್ತಿರುವುದು ಕಂಡುಬಂದಿದೆ.

ಕನ್ನಡ ಪರ ಸಂಘಟನೆ ಕಾರ್ಯಕರ್ತರು ನಗರದ ಬಸ್ ನಿಲ್ದಾಣದಲ್ಲಿ ತೆರೆದಿದ್ದ ಅಂಗಡಿಮುಗ್ಗಟ್ಟುಗಳ ಬಂದ್ ಮಾಡಿಸಿದ್ದಾರೆ, ಜೊತೆಗೆ ನಿಲ್ದಾಣಕ್ಕೆ ಆಗಮಿಸಿದ್ದ ಆಟೋಗಳನ್ನು ತಡೆದು ವಾಪಸ್ ಕಳುಹಿಸುವ ಕಾರ್ಯ ಮಾಡಲಾಗಿದೆ.

ಇದನ್ನೂ ಓದಿ: ಪ್ರತಿಭಟನಾಕಾರರಿಂದ ರೈಲು ನಿಲ್ದಾಣ ಮುತ್ತಿಗೆಗೆ ಯತ್ನ: 20 ಮಂದಿ ವಶಕ್ಕೆ!

ಬಳಿಕ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ. ಕಾವೇರಿ ನೀರು ಬಿಡುತ್ತಿರುವ ನಿರ್ಧಾರ ಖಂಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟಿಸಿದ್ದಾರೆ.

ಜೊತೆಗೆ ನಗರದಲ್ಲಿ ತಮಟೆ ಚಳವಳಿ ನಡೆಸಿ ಪ್ರತಿಭಟಿಸಿದ್ದಾರೆ. ತಮಟೆ ಬಡಿಯುತ್ತಾ, ಖಾಲಿ ಮಡಿಕೆ ಹಿಡಿದು ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿದೆ. ಹೆಗಲ ಮೇಲೆ ಖಾಲಿ ಮಡಿಕೆ ಹೊತ್ತು ತಮಟೆ ಬಡಿಯುತ್ತಾ ಮೆರವಣಿಗೆ ಮಾಡಲಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles