ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ವಿಧಾನಸೌಧದಲ್ಲಿ ರಾಜ್ಯ ಸರ್ಕಾರ ಏರ್ಪಡಿಸಿದ್ದ ‘ಸಂವಿಧಾನ ಪೀಠಿಕೆ ವಾಚನ’ ಕಾರ್ಯಕ್ರಮ ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್’ಗೆ ಸೇರಿ ಹೊಸ ದಾಖಲೆ ಸೃಷ್ಠಿಯಾಗಿದೆ.
ರಾಜ್ಯ ಸರ್ಕಾರ ಇಂದು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆನ್‌ಲೈನ್ ಮೂಲಕ ಸಂವಿಧಾನ ಪೀಠಿಕೆ ಓದಲು ಎರಡು ಕೋಟಿ ಮುವತ್ತೆರಡು ಲಕ್ಷ ಜನ ನೊಂದಣಿ ಮಾಡಿಕೊಂಡಿದ್ದರು. 52 ದೇಶಗಳಲ್ಲಿ ವಾಸವಾಗಿರುವ ಭಾರತದ ಪ್ರಜೆಗಳು ನೋಂದಣಿ ಮಾಡಿಕೊಂಡಿದ್ದರು.
ಇದನ್ನೂ ಓದಿ; ‘ಸಂವಿಧಾನ ವಕೀಲರ ದಾಖಲೆ ಪುಸ್ತಕವಲ್ಲ; ನಮ್ಮೆಲ್ಲರ ಬದುಕಿಗೆ ಅನಿವಾರ್ಯ’
ರಾಜ್ಯ ಸರ್ಕಾರದ ಈ ಕಾರ್ಯಕ್ರಮ ಇದೀಗ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ಗೆ ಸೇರಿದ್ದು, ವರ್ಲ್ಡ್ ಬುಕ್ ಆಪ್ ರೆಕಾರ್ಡ್ ಸಂಸ್ಥೆ ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಿದೆ. ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಅವರಿಗೆ ದಾಖಲೆ ಪತ್ರ ನೀಡಲಾಗಿದೆ. ವಿಶೇಷವೆಂದರೆ. ವಿಧಾನಸೌಧದ ಮೆಟ್ಟಿಲ ಮೇಲೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲೇ ಸರ್ಟಿಫಿಕೇಟ್ ಹಸ್ತಾಂತರಿಸಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ, ‘ಪ್ರಪಂಚದಾದ್ಯಂತ ಕೋಟ್ಯಾಂತರ ಜನರಿಂದ ಕಾರ್ಯಕ್ರಮ ವೀಕ್ಷಿಸಲಾಗ್ತಿದೆ.. ನಮ್ಮ ಈ ಸಂವಿಧಾನ ಪೀಠಿಕೆ ಓದು ಹೊಸ ಇತಿಹಾಸ ಬರೆದಿದೆ. ಇಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಅಸಮಾನತೆ ತೊಡೆದು ಸಮಸಮಾಜದ ಕಡೆಗೆ ಸಾಗಬೇಕಿದೆ. ಸಂವಿಧಾನದ ಮೂಲಭೂತ ವಿಚಾರವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ’ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.