ಬೆಂಗಳೂರು: ವಿಧಾನ ಸಭೆ ಎಲೆಕ್ಷನ್ ಹತ್ತಿರವಾಗ್ತಿದ್ದಂತೆ ಎಲ್ಲ ಪಕ್ಷಗಳು ತಮ್ಮದೇ ತಯಾರಿಯಲ್ಲಿ ತೊಡಗಿಕೊಂಡಿವೆ . ಆಶ್ವಾಸನೆ ಮೇಲೆ ಆಶ್ವಾಸನೆ ಕೊಡುತ್ತಿರುವ ಸರ್ಕಾರಗಳು ರ್ಯಾಲಿ, ರೋಡ್ ಶೋ, ಸಮಾವೇಶ ಅಂತ ಫುಲ್ ಬ್ಯುಸಿಯಾಗಿವೆ.
2023ರ ಚುನಾವಣೆ ಸಮೀಪ ಇದ್ದು, ಹೆಚ್ ಡಿ ಕುಮಾರಸ್ವಾಮಿ ಪಂಚರತ್ನಯಾತ್ರೆ ಮಾಡಿದ್ರೆ , ಕಾಂಗ್ರೆಸ್ ಜೆಡಿಎಸ್ ಗೆ ಫೈಟ್ ಕೊಡಲು ಬಿಜೆಪಿ ಸಹ ಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.ರಥದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿರೋ 4 ವಿಶೇಷ ಬಸ್ ಗಳಲ್ಲಿ ಬಿಜೆಪಿ ನಾಯಕರು ಮತಯಾಚನೆ ಮಾಡಲಿದ್ದಾರೆ. ಬಸ್‌ನ ಒಳಗಡೆ 7 ಸೀಟ್ ಗಳ ವ್ಯವಸ್ಥೆ ಮಾಡಲಾಗಿದೆ, ಯಾತ್ರೆ ವೇಳೆ ಸಣ್ಣಪುಟ್ಟ ಸಭೆ ನಡೆಸಲು ಅನುಕೂಲ ಮಾಡಲಾಗಿದೆ. ಇನ್ನೂ ಹಲವು ವಿಶೇಷತೆಗಳನ್ನು ಈ ಕೇಸರಿ ರಥದಲ್ಲಿ ಅಳವಡಿಸಲಾಗಿದೆ.
ಮೊದಲ ರಥಯಾತ್ರೆಯನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲು ಕೇಸರಿ ಪಡೆ ನಿರ್ಧರಿಸಿದ್ದು,”ವಿಜಯ ಸಂಕಲ್ಪ ಯಾತ್ರೆ ಮೂಲಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಸರಕಾರದ ಸಾಧನೆ ಹಾಗೂ ನೀಡಿದ ಸವಲತ್ತುಗಳನ್ನು ಜನರಿಗೆ ತಿಳಿಸಲಾಗುವುದು,
”ವಿಜಯ ಸಂಕಲ್ಪ ಯಾತ್ರೆಯನ್ನು ನಾಲ್ಕು ತಂಡಗಳಾಗಿ ಮಾಡಲಾಗಿದ್ದು, ಮೊದಲನೇ ತಂಡ ಮಾರ್ಚ್ 1ರಂದು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ಕಾರ್ಯಕ್ರಮ ಆರಂಭಿಸಲಿದೆ. ಹನೂರಿನಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಜೆ.ಪಿ.ನಡ್ಡಾ ಮಾತನಾಡಲಿದ್ದಾರೆ.ಯಾತ್ರೆಯ ಮೊದಲ ತಂಡವು 58 ವಿಧಾನಸಭಾ ಕ್ಷೇತ್ರಗಳ 18 ಕಡೆ ಸಭೆಗಳು ಹಾಗೂ 35ರಿಂದ 40 ಕಡೆ ರೋಡ್ ಶೋ ನಡೆಸಲಿದೆ.
ಮಾ. 1, 2ರಂದು ಹನೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ, ನಂಜನಗೂಡಿನಲ್ಲಿ, ಮಾ. 3ರಿಂದ 5ರವರೆಗೆ ಮೈಸೂರು ಗ್ರಾಮಾಂತರ ಹಾಗೂ ಮೈಸೂರು ನಗರದಲ್ಲಿ ವಿಜಯ ಸಂಕಲ್ಪಯಾತ್ರೆ ನಡೆಯಲಿದೆ. ನಂತರ ಮಂಡ್ಯ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮುಖಾಂತರ ದಾವಣಗೆರೆ ಹರಿಹರದಲ್ಲಿ ಸಂಪನ್ನಗೊಳ್ಳಲಿದೆ.