ಹುಬ್ಬಳ್ಳಿ: ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಸೇರಿದಂತೆ ಅನೇಕ ರಾಜಕಾರಣಿಗಳು ತಾಕತ್, ಧಮ್ ಎಂಬ ಶಬ್ದಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ರಾಜಕಾರಣ ಹೊಲಸು ಹಿಡಿದಿದೆ. ಇದು ರಿಪೇರಿ ಆಗಲೇಬೇಕು ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಕಿಡಿಕಾರಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ರಾಜಕಾರಣಿಗಳು ಕನ್ನಡ ಕೊಲ್ಲುತ್ತಿದ್ದಾರೆ. ಜೊತೆಗೆ ನಾನು 50 ವರ್ಷಗಳಿಂದ ರಾಜಕಾರಣ ನೋಡುತ್ತಿದ್ದೇನೆ. ಇಂದು ಪಕ್ಷಕ್ಕಿಂತ ಪಕ್ಷದ ನಾಯಕರು ದೊಡ್ಡವರಾಗಿದ್ದಾರೆ ಎಂದು ಹೇಳಿದರು.
ನಾವೆಲ್ಲ ಬಂದು ಬಿಜೆಪಿ ಸರ್ಕಾರವನ್ನು ರಚಿಸಿದೆವು. ಆದರೆ ಇವರೆಲ್ಲ ಎಡವಟ್ಟು ಗಿರಾಕಿಗಳು. ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದಾರೆ. ಶಾಲೆಗೆ ಕಾವಿ ಬಣ್ಣ ಹೊಡೆಯುವುದು ಯೋಜನೆನಾ ಎಂದು ಪ್ರಶ್ನಿಸಿದರು.
ಈ ಬಾರಿ ಚುನಾವಣೆಯಲ್ಲಿ ಬಿ.ಎಸ್ ಯಡಿಯೂರಪ್ಪ ನಮ್ಮ ಮ್ಯಾಜಿಕ್ 150 ಎನ್ನುತ್ತಾರೆ, ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ 115 ನಮ್ಮ ಮ್ಯಾಜಿಕ್ ಅನ್ನುತ್ತಾರೆ, ಅದೇ ರೀತಿ ಹೆಚ್.ಡಿ ಕುಮಾರಸ್ವಾಮಿ 123 ಅಂತಾರೆ.
ಚುನಾವಣೆನೆ ಪ್ರಜಾಪ್ರಭುತ್ವದ ಆತ್ಮ. ಆದರೆ ಬಿಜೆಪಿ ಅಯೋಗ್ಯ ಸರ್ಕಾರ ಆತ್ಮವನ್ನೇ ಕಸಿಯುತ್ತಿದೆ. ಮತದಾರ ಹೆಸರನ್ನು ಡಿಲೀಟ್ ಮಾಡಿ ಅವರ ಆತ್ಮ ಕಸಿಯುತ್ತಿದೆ. ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಪುಡಿ ರೌಡಿ ತರಹ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.