ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಂದೆ -ಮಕ್ಕಳು ಅಖಾಡಕ್ಕಿಳಿದಿದ್ದು, ಗೆಲುವಿನ ನಗೆ ಬೀರಿದವರು ಯಾರು ? ಸೋತವರು ಯಾರು ಎಂದು ತಿಳಿದುಕೊಳ್ಳೋಣ , ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ನಿಂದ ಹೆಚ್ ಡಿ ಕುಮಾರಸ್ವಾಮಿಗೆ ಗೆಲುವಾಗಿದ್ದು, ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸೋಲಾಗಿದೆ.
ಇನ್ನೂ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕಿ ರೂಪಾ ಕಲಾ ಶಶಿಧರ್ ಅವರು ಸ್ಪರ್ಧಿಸುತ್ತಿದ್ದರೆ, ಅವರ ತಂದೆ ಕೆ.ಎಚ್.ಮುನಿಯಪ್ಪ ದೇವನಹಳ್ಳಿ ಕ್ಷೇತ್ರದಿಂದ ಕಣಕ್ಕೆ ಧುಮುಕಿದ್ದಾರೆ.ಕೆ ಹೆಚ್ ಮುನಿಯಪ್ಪಗೆ ಗೆಲುವಾಗಿದ್ದರೆ, ಕೆಜಿಎಫ್ ನಿಂದ ರೂಪಕಲಾ ಶಶಿಧರ್‌ಗೆ ಗೆಲುವು ದೊರೆತಿದೆ.
ದಾವಣಗೆರೆ ದಕ್ಷಿಣದಿಂದ ಕಾಂಗ್ರೆಸ್ ಹಿರಿಯ ಮುತ್ಸದ್ಧಿ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಹಾಗೂ ದಾವಣಗೆರೆ ಉತ್ತರದಿಂದ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅಖಾಡಕ್ಕೆ ಇಳಿದಿದ್ದರು. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ – ಮುನ್ನಡೆ ಸಾಧಿಸಿದ್ದು, ಎಸ್ ಎಸ್ ಮಲ್ಲಿಕಾರ್ಜುನ ದಾವಣಗೆರೆ ಉತ್ತರದಲ್ಲಿ ವಿನ್ ಆಗಿದ್ದಾರೆ.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದಿಂದ ಅವರ ಪುತ್ರಿ ಸೌಮ್ಯ ರೆಡ್ಡಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ರಾಮಲಿಂಗಾರೆಡ್ಡಿಗೆ ಬಿಟಿಎಂ ಲೇಔಟ್‌ನಲ್ಲಿ ಮುನ್ನಡೆ ಸಾಧಿಸಿದ್ದು, ಸೌಮ್ಯ ರೆಡ್ಡಿಗೆ ಜಯನಗರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದರೆ, ಅವರ ಮಗ ಹರೀಶ್‌ಗೌಡ ಜಿ.ಡಿ ಅವರು ಹುಣಸೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದು ಅಪ್ಪ -ಮಗನಿಗೆ ಅವರವರ ಕ್ಷೇತ್ರದಲ್ಲಿ ಗೆಲುವಾಗಿದೆ, ಮಡಿಕೇರಿಯಲ್ಲಿ ಕಾಂಗ್ರೆಸ್ನಿಂದ ಮಂಥರ್‌ಗೌಡ ಕಣದಲ್ಲಿದ್ದು, ಅವರ ತಂದೆ ಎ.ಮಂಜು ಜೆಡಿಎಸ್ನಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದರು. ವಾಲೆ ಮಂಜುಗೆ ಗೆಲುವಾಗಿದ್ದು, ಅರಕಲಗೂಡಿನಲ್ಲಿ ಗೆಲುವಾಗಿದ್ದು, ಡಾ ಮಂಥರ್ ಗೌಡ ಮಡಿಕೇರಿಯಲ್ಲಿ ವಿಜಯದ ಹಾರ ಧರಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಎಂ.ಕೃಷ್ಣಪ್ಪ ವಿಜಯನಗರ ಕ್ಷೇತ್ರದಿಂದ ಹಾಗೂ ಅವರ ಪುತ್ರ ಪ್ರಿಯಾಕೃಷ್ಣ ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಎಂ ಕೃಷ್ಣಪ್ಪ ಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದು ವಿಜಯನಗರದಲ್ಲಿ ಗೆದ್ದಿದ್ದಾರೆ. ಇನ್ನೂ ಅವರ ಮಗ ಪ್ರಿಯ ಕೃಷ್ಣ ಇಬ್ಬರಿಗೂ ಗೆಲುವು ಸಿಕ್ಕಿದೆ.
ಇನ್ನು ಅಪ್ಪ – ಮಕ್ಕಳ ಗೆಲುವಿನ ಬೆನ್ನಲ್ಲೇ ಅಖಾಡಕ್ಳಿಳಿದ ಸಹೋದರರಲ್ಲಿ ಗೆಲುವು-ಸೋಲು ಯಾರಿಗೆ ಎಂದು ನೋಡೋದಾದ್ರೆ, ಕುಮಾರ್ ಬಂಗಾರಪ್ಪ ಬಿಜೆಪಿಗೆ ಹಿನ್ನಡೆಯಾಗಿದ್ದು, ಮಧು ಬಂಗಾರಪ್ಪಗೆ ಕಾಂಗ್ರೆಸ್ ನಲ್ಲಿ ಮುನ್ನಡೆಯಾಗಿದೆ. ಹೆಚ್ ಡಿ ಕುಮಾರಸ್ವಾಮಿ –ಚನ್ನಪಟ್ಟಣದಲ್ಲಿ ಜೆಡಿಎಸ್ ಗೆದ್ದರೆ, ಹೆಚ್ ಡಿ ರೇವಣ್ಣ – ಜೆಡಿಎಸ್ನಿಂದ ಸ್ಪರ್ಧಿಸಿ ಸಕಲೇಶಪುರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಇನ್ನೂ ಸತೀಶ್ ಜಾರಕಿಹೊಳಿ ಯಮಕನಮರಡಿ ಕಾಂಗ್ರೆಸ್ನಿಂದ ಮುನ್ನಡೆ ಸಾಧಿಸಿದ್ರೆ, ರಮೇಶ್ ಜಾರಕಿಹೊಳಿಗೆ ಗೋಕಾಕ್ ಬಿಜೆಪಿಯಲ್ಲಿ ಹಿನ್ನಡೆಯಾಗಿದೆ , ಹಾಗೂ ಅರಬಾವಿಯಲ್ಲಿ ಇನ್ನು ಬಾಲಚಂದ್ರ ಜಾರಕಿಹೊಳಿಗೆ ಗೆಲುವಾಗಿದೆ.