Thursday, June 8, 2023
spot_img
- Advertisement -spot_img

ಯಾರಾಗ್ತಾರೆ ಕರುನಾಡಿಗೆ ಮುಂದಿನ ಸಿಎಂ?

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಗೆದ್ದಿದ್ದು, ಮುಂದಿನ ಸಿಎಂ ಯಾರು ಎಂಬ ಚರ್ಚೆ ಆರಂಭವಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ಸಿಎಂ ಕುರ್ಚಿಗಾಗಿ ಪೈಪೋಟಿ ಇದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಬಹಿರಂಗವಾಗಿಯೇ ಈ ಹಿಂದೆ ಸಾಕಷ್ಟು ಬಾರಿ ಮುಖ್ಯಮಂತ್ರಿ ಆಸೆ ಹೇಳಿದ್ದರು. ಅಷ್ಟೇ ಅಲ್ಲಧೆ ಸಿದ್ದರಾಮಯ್ಯ ಕೂಡಾ ಇದು ನನ್ನ ಕೊನೆಯ ಚುನಾವಣೆ ಎಂದಿದ್ದರು.

ಕಾಂಗ್ರೆಸ್​ನಲ್ಲಿ ಇನ್ನೊಂದಷ್ಟು ನಾಯಕರು ಮೌನವಾಗಿಯೇ ಸಿಎಂ ಪಟ್ಟದ ಮೇಲೆ ತಮ್ಮ ದೃಷ್ಟಿ ನೆಟ್ಟಿದ್ದಾರೆ. ಡಾ.ಜಿ.ಪರಮೇಶ್ವರ್​, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ ಎಂಬಿ ಪಾಟೀಲ್ ಸಿಎಂ ಸ್ಥಾನದ ಆಕಾಂಕ್ಷಿಗಳು, ಇನ್ನೂ ಕರುನಾಡಿಗೆ ಮುಂದಿನ ಸಿಎಂ ಯಾರು ಅಂತಾ ಕುತೂಹಲ ಹೆಚ್ಚಾಗಿದ್ದು, ಗೂಗಲ್‌ ಸರ್ಚ್‌ನಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಹೇಳಲಾಗುವ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೆಸರನ್ನು ಸರ್ಚ್‌ ಮಾಡಲಾಗುತ್ತಿದೆ.

ಸಿದ್ದರಾಮಯ್ಯ ಅಭಿಮಾನಿಗಳು ಬೆಂಗಳೂರಿನ ಸಿದ್ದು ನಿವಾಸದ ಹೊರಗೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಪೋಸ್ಟರ್ ಹಾಕಿ ಗಮನ ಸೆಳೆದಿದ್ರೆ, ಡಿ. ಕೆ. ಶಿವಕುಮಾರ್ ನಿವಾಸದ ಎದುರಿಗೆ ಮುಂದಿನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಎಂಬ ಪೋಸ್ಟರ್ ರಾರಾಜಿಸುತ್ತಿದೆ, ಆದ್ರೆ ಇನ್ನೂ ಸಿಎಂ ಯಾರು ಅನ್ನೋದು ಮಾತ್ರ ನಿರ್ಧಾರ ಆಗಿಲ್ಲ, ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಪೈಕಿ ಯಾರು ಸಿಎಂ ಆಗಲಿದ್ದಾರೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

Related Articles

- Advertisement -spot_img

Latest Articles