Friday, September 29, 2023
spot_img
- Advertisement -spot_img

BPL Card : ಬಿಪಿಎಲ್ ಕಾರ್ಡ್​​​​ದಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್!

Ration Card Apply : ಬಿಪಿಎಲ್ ಕಾರ್ಡ್​​​​ದಾರರಿಗೆ ಆಹಾರ ಇಲಾಖೆ ಸಿಹಿ ಸುದ್ದಿಯ ಸುಳಿವು ನೀಡಿದೆ. ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಲ್ಲಿಕೆಯಾಗಿರುವ 3 ಲಕ್ಷ ಎಪಿಎಲ್ ಕಾರ್ಡ್ ಅರ್ಜಿಗಳಲ್ಲಿ ಶೇ.75 ರಷ್ಟು ದೃಢೀಕರಣ ಪೂರ್ಣಗೊಂಡಿದೆ. ಸದ್ಯದಲ್ಲೆ ಈ ಕಾರ್ಡ್​​​ಗಳನ್ನು ವಿತರಣೆ ಮಾಡುವ ಸಾಧ್ಯತೆ ಇದೆ.

ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಕಾರ್ಡ್​​ಗಳನ್ನು ವಿತರಣೆ ಮಾಡಿದರೆ, ಹೊಸ ಕಾರ್ಡ್​​​ಗಳಿಗೆ ಅವಕಾಶ ನೀಡಬಹುದಾಗಿದೆ. ಸದ್ಯ ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲದೇ, ಅರ್ಜಿ ಸಲ್ಲಿಕೆ ಮಾಡಿದ ಕಾರ್ಡ್​​ಗಳೂ ಸಿಗದೆ ಜನ ರೋಸಿ ಹೋಗಿದ್ದಾರೆ.

ಇದನ್ನೂ ಓದಿ : ಕೈ ಶಾಸಕ, ಬಿಜೆಪಿ ಸಂಸದರ ನಡುವೆ ಸಕ್ಕರೆ ಕಾರ್ಖಾನೆಯ ಹಗ್ಗ ಜಗ್ಗಾಟ

ಈ ಮಧ್ಯೆ, ಬಿಪಿಎಲ್ ಕಾರ್ಡ್​​ಗಳಲ್ಲಿ ಮೃತಪಟ್ಟಿರುವ ಫಲಾನುಭವಿಗಳ ಹೆಸರುಗಳನ್ನು ತೆಗೆಯುವುದಲ್ಲದೆ ಆಹಾರ ಇಲಾಖೆಯ ಕಾಯ್ದೆಗಳನ್ನು ಉಲ್ಲಂಘಿಸಿ ಬಳಸುತ್ತಿದ್ದ ಫಲಾನುಭವಿಗಳನ್ನ ಪತ್ತೆ ಮಾಡಲಾಗುತ್ತಿದೆ. ಕಳೆದ ತಿಂಗಳಷ್ಟೇ 5 ಲಕ್ಷಕ್ಕೂ ಹೆಚ್ಚು ಕಾರ್ಡ್​​​ಗಳನ್ನು ರದ್ದು ಮಾಡಲಾಗಿದೆ. ರಾಷ್ಟ್ರೀಯ ಆಹಾರ ಹಕ್ಕು ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಮಿತಿಯನ್ನು ಮೀರಿದ್ದರಿಂದ ಹೊಸ ಆರ್ಜಿ ಸಲ್ಲಿಕೆಗೆ ಅವಾಕಾಶ ನೀಡಿರಲಿಲ್ಲ.

ತಿದ್ದುಪಡಿಗೆ ಅವಕಾಶ ನೀಡಿದ್ದ ಸರ್ಕಾರ

ಬಿಪಿಎಲ್​ ಕಾರ್ಡ್​ನಲ್ಲಿ ಪುರುಷರು ಮುಖ್ಯಸ್ಥರಾಗಿದ್ದರೆ ಗೃಹಲಕ್ಷ್ಮಿ ಯೋಜನೆಯಿಂದ ಆ ಕುಟುಂಬದ ಮಹಿಳೆಯರು ವಂಚಿತರಾಗಬೇಕಾಗುತ್ತದೆ. ಈ ಕಾರಣಕ್ಕೆ ಮನೆ ಮುಖ್ಯಸ್ಥರ ಹೆಸರು ಬದಲಾವಣೆಗೆ ಸೆಪ್ಟೆಂಬರ್ 1ರಿಂದ ಸರ್ಕಾರ ಅನುಮತಿ ನೀಡಿತ್ತು. ನಿಯಮದ ಪ್ರಕಾರ ಬಿಪಿಎಲ್ ಕಾರ್ಡ್ ನಲ್ಲಿ ಮಹಿಳೆಯರೇ ಮುಖ್ಯಸ್ಥರಿರಬೇಕು. ಮಹಿಳಾ ಮುಖ್ಯಸ್ಥರಿದ್ದರೆ ಮಾತ್ರ ಬಿಪಿಎಲ್ ಸೌಲಭ್ಯ ದೊರೆಯಲಿದೆ. ಆದ್ರೆ, ಆಹಾರ ಇಲಾಖೆಯ ಪ್ರಕಾರ 6 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಪುರುಷ ಮುಖ್ಯಸ್ಥ ಕಾರ್ಡ್ ದಾರರು ಇದ್ದಾರೆ ಎಂಬುದು ದಾಖಲೆಗಳಿಂದ ತಿಳಿದುಬಂದಿತ್ತು. ಹೀಗಾಗಿ ಸರ್ಕಾರ ತಿದ್ದುಪಡಿಗೆ ಅವಕಾಶ ನೀಡಿತ್ತು.

ಇದನ್ನೂ ಓದಿ : ಜೆಡಿಎಸ್-ಬಿಜೆಪಿ ಮೈತ್ರಿ; ಕಾಂಗ್ರೆಸ್ ನಿರ್ನಾಮಕ್ಕಾಗಿ ನಾವು ಒಂದಾಗಿದ್ದೇವೆ : ಈಶ್ವರಪ್ಪ

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles