Monday, December 4, 2023
spot_img
- Advertisement -spot_img

ಪ್ರಾಧಿಕಾರದ ಆದೇಶಕ್ಕೆ ಮಣಿದ ರಾಜ್ಯ ಸರ್ಕಾರ; ರಾತ್ರೋರಾತ್ರಿ ತಮಿಳುನಾಡಿಗೆ ನೀರು!

ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ಪ್ರಶ್ನಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದ್ದು, ಪ್ರತಿನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ಹೊರಡಿಸಿತ್ತು. ಸಿಡಬ್ಲ್ಯೂಎಂಎ ಆದೇಶಕ್ಕೆ ಮಣಿದಿರುವ ರಾಜ್ಯ ಸರ್ಕಾರ ರಾತ್ರೋರಾತ್ರಿ ಕೆಆರ್‌ಎಸ್‌ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಬಿಟ್ಟಿದೆ.

ಪ್ರಾಧಿಕಾರದ ಆದೇಶದಂತೆ ರಾಜ್ಯ ಸರ್ಕಾರ ನೀರು ಹರಿಸಲು ಆರಂಭಿಸಿದೆ. ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಪ್ರಾಧಿಕಾರ ಆದೇಶ ನೀಡಿದ್ದು, ಸಿಡಬ್ಲ್ಯೂಎಂಎ ಆದೇಶಕ್ಕೆ ಮಣಿದು ಸರ್ಕಾರ ನೀರು ಹರಿಸುತ್ತಿದೆ. ಕಳೆದ ರಾತ್ರಿಯಿಂದಲೇ ತಮಿಳುನಾಡಿಗೆ ನೀರು ಹರಿಯುತ್ತಿದೆ.
ಮಂಡ್ಯ, ಮೈಸೂರು ಭಾಗದ ರೈತರ ಹೋರಾಟಕ್ಕೆ ಮನ್ನಣೆ ಕೊಡದೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಕೆಆರ್‌ಎಸ್‌ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿದ್ದರೂ ರಾಜ್ಯ ಸರ್ಕಾರ ಪ್ರಾಧಿಕಾರದ ಆದೇಶ ಪಾಲನೆ ಮಾಡುತ್ತಿದೆ.

ಇದನ್ನೂ ಓದಿ; ಖಲಿಸ್ತಾನಿ ಮುಖ್ಯಸ್ಥನ ಹತ್ಯೆ ಆರೋಪ : ಭಾರತದ ಗುಪ್ತಚರ ಅಧಿಕಾರಿಯನ್ನು ಉಚ್ಚಾಟಿಸಿದ ಕೆನಡಾ

ಕೆಆರ್‌ಎಸ್‌ ಡ್ಯಾನಿಂದ ತಮಿಳುನಾಡಿಗೆ 2,171 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕಬಿನಿ ಜಲಾಶಯದಿಂದ 1,663 ಕ್ಯೂಸೆಕ್ ಸೇರಿದಂತೆ ಎರಡೂ ಡ್ಯಾಂಗಳಿಂದ ಒಟ್ಟು 3,834 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನಿನ್ನೆ ಡ್ಯಾಂ ಕೆಳ ಭಾಗದಲ್ಲಿ ಬಿದ್ದಿರುವ ಮಳೆ ನೀರು ಉಳಿದ‌ 1,166 ಕ್ಯೂಸೆಕ್ ನೀರು ಸಹ ತಮಿಳುನಾಡಿಗೆ ಹರಿದಿದೆ.

ಕೆ.ಆರ್.ಎಸ್ ಇಂದಿನ ನೀರಿನ ಮಟ್ಟ:

ಗರಿಷ್ಠ ಮಟ್ಟ : 124.80 ಅಡಿಗಳು.
ನೀರಿನ ಮಟ್ಟ: 97.06 ಅಡಿಗಳು.
ಒಳಹರಿವು : 7007 ಕ್ಯೂಸೆಕ್
ಹೊರಹರಿವು : 5735 ಕ್ಯೂಸೆಕ್
ಇಂದಿನ ಸಂಗ್ರಹ : 20.592 ಟಿಎಂಸಿ
ಗರಿಷ್ಠ ಸಂಗ್ರಹ : 49.452 ಟಿಎಂಸಿ

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles