ಹುಬ್ಬಳ್ಳಿ : ಕಾವೇರಿ, ಕೃಷ್ಣಾ ಎರಡು ಕಣ್ಣು ಇದ್ದಂತೆ ಎಂದು ಶಾಸಕ ಎನ್ ಹೆಚ್ ಕೋನರಡ್ಡಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ನೀರು ಇಲ್ಲದೇ ಇದ್ದಾಗ ತಮಿಳುನಾಡು, ಆಂಧ್ರಪ್ರದೇಶಗಳು ನೀರು ಕೊಡಿ ಅಂತ ಕೇಳ್ತಾರೆ , ನಮಗೆ ನೀರು ಇಲ್ಲಾ, ನಿಮಗೆ ಹೇಗೆ ಕೊಡೋದು ಅಂತ ಹೇಳುವ ಕೆಲಸ ಸರ್ಕಾರ ಮಾಡ್ತಾ ಇದೆ ಎಂದು ಆಕ್ರೋಶಿಸಿದರು.
ನ್ಯಾಯಾಧೀಶರು ಹಾಗೂ ಆದೇಶ ಮಾಡಿದ ಬೋರ್ಡ್ ಗೆ ಇಲ್ಲಿ ನೀರು ಇದೆಯಾ ಇಲ್ವಾ ಅಂತ ಚೆಕ್ ಮಾಡಿ, ಮೊದಲೇ ನೀರು ನಮಗಿಲ್ಲ, ಕಾವೇರಿ ನೀರು ಕೇಳಿದ್ರೆ ನಮ್ಮ ರೈತರು ಏನು ಮಾಡಬೇಕು? ಎಂದು ಪ್ರಶ್ನಿಸಿದರು. ನಮ್ಮ ರೈತರು ಎಲ್ಲಾ ಕಡೆ ಹೋರಾಟ ಮಾಡ್ತಾ ಇದ್ದಾರೆ, ಕಲ್ಲು ತಲೆ ಮೇಲೆ ಇಟ್ಟುಕೊಂಡು ಹೋರಾಟ ಮಾಡ್ತಾ ಇದ್ದಾರೆ, ನೀರೇ ಇಲ್ದಾಗ ನ್ಯಾಯಾಲಯದ ಆದೇಶ ಹೇಗೆ ಪಾಲಿಸಬೇಕು? ಇದು ಗಂಭೀರ ಸಮಸ್ಯೆ ಇದೆ ಎಂದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಿಯೋಗ ಮಾಡಿ ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡ್ತಾ ಇದ್ದಾರೆ, ಮಹದಾಯಿ ವಿಚಾರವಾಗಿ ಪ್ರತಿಕ್ರಿಯಿಸಿ, ಕೃಷ್ಣಾ ಕಣಿವೆ ರಾಷ್ಟ್ರೀಯ ಯೋಜನೆ ಅಂತ ಘೋಷಣೆ ಮಾಡಬೇಕು, ರಾಜ್ಯ ಸರ್ಕಾರ ಮೂಲಭೂತ ಅಂಕಿ ಅಂಶ ಎಲ್ಲಾ ಕೊಟ್ಟಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ : G20 Summit-23: ಸೆ.8ರಂದು ಮೋದಿ-ಬೈಡೆನ್ ದ್ವಿಪಕ್ಷೀಯ ಮಾತುಕತೆ
ತುಂಗಾ ರಾಷ್ಟ್ರೀಯ ಯೋಜನೆ ಅಂತ ಘೋಷಣೆ ಮಾಡಿದ್ದಾರೆ, ಮಹದಾಯಿ ಆಗೇ ಬಿಟ್ಟಿದೆ ಅಂತ ಬಿಜೆಪಿ ಅವರು ವಿಜಯೋತ್ಸವ ಮಾಡಿದ್ರು, ಈಗ ಅವರೇ ಉತ್ತರ ಹೇಳ್ತಿಲ್ಲ ಜೋಶಿ ಸಾಹೇಬ್ರನ್ನ ನಾವು ಬಿಡೋದೇ ಇಲ್ಲಾ, ನೀವು ಮಾಡ್ಲೇ ಬೇಕು ಅಂತ ಬೆನ್ನು ಬೀಳ್ತಿವಿ, ಮಹದಾಯಿ ಜಾರಿ ಆಗುವವರೆಗೂ ಹೋರಾಟ ನಿರಂತರ ಎಂದು ತಿಳಿಸಿದರು.
ಕೋನರಡ್ಡಿ ಕಾಂಗ್ರೆಸ್ ಗೆ ಬಂದ ನಂತರ ತುಂಬಾ ಮಾತಾಡ್ತಾ ಇದ್ದಾರೆ ಎಂಬ ಜೋಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಜನತಾ ದಳದಲ್ಲಿದ್ದಾಗಲೂ ಮಾತಾಡಿದ್ದೇನೆ, ಈಗಲೂ ಮಾತಾಡ್ತಾ ಇದ್ದೇನೆ, ನಾನು ಮಾತಾಡೋದು ಬಿಟ್ಟಿದ್ದು ಯಾವಾಗ?ಎಂದು ಪ್ರಶ್ನಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.