ಮಂಡ್ಯ : ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಮಹತ್ವದ ಅರ್ಜಿ ವಿಚಾರಣೆ ನಡೆಯಲಿದೆ.
ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳ ರೈತರ ಹಿತ ಕಾಪಾಡಬೇಕಾದ ಅತ್ಯಂತ ಮಹತ್ವದ ಪ್ರಕರಣ ಇದಾಗಿದೆ. ಸುಪ್ರೀಂ ಕೋರ್ಟ್ ಮುಂದೆ ಕರ್ನಾಟಕ ಸರ್ಕಾರದ ಅರ್ಜಿ, ತಮಿಳುನಾಡು ಸರ್ಕಾರದ ಅರ್ಜಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅರ್ಜಿ, ಮಂಡ್ಯದ ರೈತ ಸಂಘದ ಅರ್ಜಿ, ಹೀಗೆ ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿವೆ. ಸರ್ವೋಚ್ಚ ನ್ಯಾಯಾಲಯ ನಾಲ್ಕು ಆಯಾಮಗಳಲ್ಲಿ ಈ ಅರ್ಜಿಗಳ ವಿಚಾರಣೆಯನ್ನು ಕೂಲಂಕುಷವಾಗಿ ನಡೆಸಲಿದೆ.
ಕರ್ನಾಟಕ ಸರ್ಕಾರದ ಅರ್ಜಿಯಲ್ಲಿ ಏನಿದೆ?
- ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ
- ಕೆಆರ್‌ಎಸ್ ಡ್ಯಾಂನಲ್ಲಿ ಅಗತ್ಯಕ್ಕೆ ಬೇಕಾದಷ್ಟು ನೀರಿಲ್ಲ
- ಕಬಿನಿ, ಹೇಮಾವತಿ, ಹಾರಂಗಿ ಡ್ಯಾಂನಲ್ಲೂ ನೀರಿನ ಅಭಾವ ಎದುರಾಗುತ್ತಿದೆ
- ಈಗಾಗಲೇ ನಾವು ಕಾವೇರಿ ಪ್ರಾಧಿಕಾರ ಹೇಳಿದಷ್ಟು ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇವೆ
- ನಮ್ಮ ಡ್ಯಾಂನಲ್ಲಿ ಅಗತ್ಯ ಪ್ರಮಾಣದಲ್ಲಿ ನೀರು ಇಲ್ಲದಿದ್ದರೂ, 3 ತಿಂಗಳಲ್ಲಿ ತಮಿಳುನಾಡಿಗೆ 35 ಟಿಎಂಸಿ ನೀರು ಬಿಟ್ಟಿದ್ದೇವೆ
- ತಮಿಳುನಾಡು ಕೇಳಿದಷ್ಟು ನೀರು ಬಿಡಲು ನಮ್ಮ ಮೂರು ಡ್ಯಾಂಗಳಲ್ಲೂ ನೀರಿಲ್ಲ
- ಇರುವ ನೀರು ಕೊಟ್ಟರೆ ನಮಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ
ತಮಿಳುನಾಡು ಸರ್ಕಾರದ ಅರ್ಜಿಯಲ್ಲಿ ಏನಿದೆ?
- ಜೂನ್, ಜುಲೈ, ಆಗಸ್ಟ್ ತಿಂಗಳ ನೀರು ಕೊಡಿಸಿ
- ಮೂರು ತಿಂಗಳ ಅವಧಿಯಲ್ಲಿ ಕರ್ನಾಟಕ 80 ಟಿಎಂಸಿ ನೀರು ಕೊಡಬೇಕು
- ಮೆಟ್ಟೂರು ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಆಗುತ್ತಿದೆ
- ಮೆಟ್ಟೂರು ಡ್ಯಾಂ ವ್ಯಾಪ್ತಿಯ ಕೃಷಿ ಜಮೀನಿಗೆ ನೀರಿನ ಅಗತ್ಯವಿದೆ
- ಸದ್ಯ ಕರ್ನಾಟಕ ಬಿಡುತ್ತಿರುವ ನೀರು ಸಾಲುತ್ತಿಲ್ಲ
- ಒಪ್ಪಂದದ ಪ್ರಕಾರ ಕರ್ನಾಟಕ ಹೆಚ್ಚುವರಿ ನೀರು ಬಿಡಬೇಕು
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅರ್ಜಿಯಲ್ಲಿ ಏನಿದೆ?
- ಕರ್ನಾಟಕ ತಮಿಳುನಾಡಿಗೆ ಮೂರು ತಿಂಗಳಲ್ಲಿ 35 ಟಿಎಂಸಿ ನೀರು ಬಿಟ್ಟಿದೆ
- ಕಾವೇರಿ ಪ್ರಾಧಿಕಾರ ಸೂಚನೆ ನೀಡಿದಾಗಲೆಲ್ಲಾ ಕರ್ನಾಟಕ ನೀರು ಬಿಟ್ಟಿದೆ
- ತಮಿಳುನಾಡು ತಮ್ಮ ಖೋಟಾದ ನೀರು ಕೇಳ್ತಾ ಇದೆ
- ಇದುವರೆಗೆ ಸಂಕಷ್ಟ ಸೂತ್ರವನ್ನು ಸಿದ್ದಪಡಿಸಿಲ್ಲ
- ಎರಡು ಸರ್ಕಾರಗಳು ಸಂಕಷ್ಟ ಸೂತ್ರವನ್ನು ಸಿದ್ದಪಡಿಸಬೇಕಿತ್ತು
- ಸಂಕಷ್ಟ ಸೂತ್ರ ಅನುಸರಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ
- ಕೃಷಿಯ ಜೊತೆಗೆ ಕುಡಿಯುವ ನೀರಿನ ಕಡೆ ಗಮನ ಕೊಡುವುದು ಸೂಕ್ತ
ರೈತ ಸಂಘದ ಅರ್ಜಿಯಲ್ಲಿ ಏನಿದೆ?
- ಕೆಆರ್‌ಎಸ್ ಡ್ಯಾಂನಲ್ಲಿ ಈಗ ಇರುವುದು 22 ಟಿಎಂಸಿ ನೀರು
- ಡ್ಯಾಂನಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ನೀರಿದೆ
- ಉಳಿಕೆ ನೀರು ಕಾವೇರಿ ನೀರು ನಂಬಿರುವ ಜನರಿಗೆ ಕುಡಿಯಲು ಕೊಡುವುದು ಕಷ್ಟ
- ನಮ್ಮಲ್ಲಿ ಮಳೆ ಬೀಳುವ ಸಮಯ ಮುಗಿದಿದೆ
- ಸದ್ಯ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು
- ಕಾವೇರಿ ಪ್ರಾಧಿಕಾರ ಡ್ಯಾಂಗಳ ಬಳಿಗೆ ಬಂದು ವಸ್ತು ಸ್ಥಿತಿಯನ್ನು ತಿಳಿಯಬೇಕು
- ಇರುವ ನೀರನ್ನು ಕುಡಿಯಲು ಉಳಿಸಬೇಕಾಗಿದೆ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.