ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಮುಂದಿನ ಶುಕ್ರವಾರ ಅಥವಾ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಬಹುದು ಎಂದು ಕರ್ನಾಟಕ ಪರ ವಾದ ಮಂಡಿಸಲಿರುವ ಹಿರಿಯ ವಕೀಲ ಮೋಹನ್ ಕಾತರಕಿ ಹೇಳಿದ್ದಾರೆ.
ಕಾವೇರಿ ನೀರು ಬಿಡುವ ವಿಚಾರವಾಗಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಒಂದು ಅರ್ಜಿ ಸಲ್ಲಿಸಿದೆ. ಈ ವರ್ಷ ಕರ್ನಾಟಕ ರಾಜ್ಯ ಕೊಡಬೇಕಿದ್ದ ನೀರು ಕೊಟ್ಟಿಲ್ಲ ಎಂದು ಆರೋಪಿಸಿದೆ. ಕರ್ನಾಟಕದಿಂದ ಪ್ರತಿನಿತ್ಯ 24 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ತಮಿಳುನಾಡು ಅರ್ಜಿ ಸಲ್ಲಿಕೆ ಮಾಡಿದೆ. ಆದರೆ ಈ ಬಾರಿ ಶೇ.42ರಷ್ಟು ಮಳೆ ಕಡಿಮೆಯಾಗಿದೆ. ಹಳೆ ಆದೇಶದಂತೆ ನೀರು ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕಾವೇರಿ ನದಿನೀರು ಹಂಚಿಕೆ ವಿವಾದ; ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಒಪ್ಪಿಗೆ
ಶೇ.42ರಷ್ಟು ಮಳೆ ಕೊರತೆಯ ನಡುವೆಯೂ 19.6 ಟಿಎಂಸಿ ನೀರು ಕರ್ನಾಟಕದಿಂದ ಬಿಟ್ಟಿದ್ದೇವೆ. ಪ್ರಸ್ತುತ ವೇರಿ ಜಲಾನಯನ ಪ್ರದೇಶದ ಡ್ಯಾಮ್‌ನಲ್ಲಿ 69 ಟಿಎಂಸಿ ನೀರಿದೆ. ಈ ಎಲ್ಲಾ ಅಂಶಗಳು ನಮ್ಮ ವಾದದಲ್ಲಿವೆ ಎಂದಿದ್ದಾರೆ.
ಇದೆ ವೇಳೆ ಕರ್ನಾಟಕವೂ ಮೇಕೆದಾಟು ಯೋಜನೆ ಕುರಿತು ಅರ್ಜಿ ಸಲ್ಲಿಸಿದೆ. ಸಂಕಷ್ಟದ ಸಂದರ್ಭದಲ್ಲಿ ಮೇಕೆದಾಟು ಜಲಾಶಯ ಸಹಕಾರಿಯಾಗಲಿದೆ. ಹೆಚ್ಚುವರಿ ನೀರನ್ನು ಮೇಕೆದಾಟು ಜಲಾಶಯದಲ್ಲಿ ಸಂಗ್ರಹಿಸಬಹುದು. ಸಂಗ್ರಹವಾದ ನೀರನ್ನು ಎರಡು ರಾಜ್ಯಗಳು ಬಳಸಬಹುದು. ಈ ಹಿನ್ನಲೆ ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೋರಲಾಗಿದೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.