ಹೈದರಾಬಾದ: ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ತನ್ನ ತಂದೆಯೊಂದಿಗೆ ಹೋಲಿಸಿ ಹೊಗಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಸಿಎಂ ಕೆಸಿಆರ್ ಅವರಂತೆಯೇ ವಿರಾಟ್ ಕೊಹ್ಲಿಯೂ ಅಜೇಯ! ಯಜಮಾನರು. ಮೈದಾನದಲ್ಲಿದ್ದಾಗ ಮ್ಯಾಜಿಕ್ ನಡೆಯುತ್ತದೆ, ವಿರಾಟ್ ಕೊಹ್ಲಿ ತಮ್ಮ 50 ನೇ ಏಕದಿನ ಶತಕವನ್ನು ಗಳಿಸಿದ್ದಾರೆ, ಈ ಮೂಲಕ ಭಾರತದ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಕಾಂಗ್ರೆಸ್, ಕವಿತಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ದೇಶಕ್ಕಾಗಿ ಆಡುವುದಕ್ಕೂ, ಆಯೋಗಕ್ಕಾಗಿ ಆಡುವುದಕ್ಕೂ ವ್ಯತ್ಯಾಸವಿದೆ ಎಂದು ಕುಟುಕಿದೆ. ಕಾಳೇಶ್ವರಂ ಹಗರಣಕ್ಕೆ ಕೆಸಿಆರ್‌ಗಿಂತ ಮಿಗಿಲಾದವರು ಯಾರೂ ಇಲ್ಲ, ಆದರೆ ಕ್ರಿಕೆಟ್‌ನಲ್ಲಿ ವಿರಾಟ್‌ಗೆ ಪೈಪೋಟಿ ಇಲ್ಲ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಕಾಂಗ್ರೆಸ್ ತಿವಿದಿದೆ.


ನವೆಂಬರ್ 30 ರಂದು ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಗೆ ತೆಲಂಗಾಣ ಸಜ್ಜಾಗುತ್ತಿರುವಂತೆಯೇ ಈ ಪೋಸ್ಟ್ ಮಾಡಲಾಗಿದೆ. ಮತಗಳ ಎಣಿಕೆ ಡಿಸೆಂಬರ್ 3 ರಂದು ನಡೆಯಲಿದೆ.