ಚಿಕ್ಕೋಡಿ: ಬ್ಲೂಟೂತ್ ಸಾಧನ ಬಳಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆ ಬರೆದ ಅಕ್ರಮ ಪ್ರಕರಣದ ಬಂಧಿತ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್’ನ ನಂಟು ಬೆಳಗಾವಿಗೂ ಹಬ್ಬಿದೆ.
ಜಿಲ್ಲೆಯ ಅಥಣಿಯ ಕರ್ನಾಟಕ ನೀರಾವರಿ ನಿಗಮದ ಕಚೇರಿಯ ಸಹಾಯಕ ಇಂಜಿನಿಯರ್ ರುದ್ರಗೌಡ ಎಮ್.ಎಮ್. ಅವರು ಆರ್.ಡಿ ಪಾಟೀಲ್ ಪರ ಕೆಲಸದ ಆರೋಪ ಮೇಲೆ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಮ.ಪ್ರದೇಶ, ಛತ್ತೀಸ್‌ಗಢ ವಿಧಾನಸಭೆ ಚುನಾವಣೆ: ಇಂದು ಮತದಾನ..!
ರುದ್ರಗೌಡ ಹಿಪ್ಪರಗಿ ಜಲಾಶಯದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಉಪವಿಭಾಗ ಕಚೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಮೂಲದ ವ್ಯಕ್ತಿ ರುದ್ರಗೌಡ, ಕಳೆದ 9 ನೇ ತಾರೀಖಿನಿಂದ ಕಚೇರಿಗೆ ಗೈರು ಹಾಜರಿದ್ದರು. ಬೆಳಗಾವಿಯಿ ಜಿಲ್ಲೆಯ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಸಹಾಯ ಮಾಡುತ್ತಿದ್ದ ಆರೋಪ ರುದ್ರಗೌಡ ಮೇಲೆ ಕೇಳಿ ಬಂದಿದೆ. ತಾವೆ ಹಣ ಪಡೆದು ಆರ್.ಡಿ ಪಾಟೀಲ್ ಜೊತೆ ಅಭ್ಯರ್ಥಿಗಳ ಡಿಲ್ ಕುದುರಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಬಿಜೆಪಿಗೆ ಮಾಜಿ ಸಂಸದೆ ವಿಜಯಶಾಂತಿ ರಾಜೀನಾಮೆ: ಮರಳಿ ಕಾಂಗ್ರೆಸ್ ಸೇರ್ಪಡೆ ಸಂಭವ!
ರುದ್ರಗೌಡ ಈಗಾಗಲೇ 17 ಕ್ಕೂ ಹೆಚ್ಚು ಅಭ್ಯರ್ಥಿಗಳ ಹಾಲ ಟಿಕೇಟ್ ಸಂಗ್ರಹಿಸಿ ಆರ್.ಡಿ.ಪಾಟೀಲ್ ಗೆ ನೀಡಿರುವ ಮಾಹಿತಿ ಇದೆ. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಆರ್.ಡಿ.ಪಾಟೀಲ್ ಜೋತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಹಿನ್ನಲೆ ಸಿಐಡಿ ಪೊಲೀಸರು ರುದ್ರಗೌಡ ಅವರನ್ನು ವಶಕ್ಕೆ ಪಡೆದು ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.