Wednesday, November 29, 2023
spot_img
- Advertisement -spot_img

ಸರ್ಕಾರಿ ಪರೀಕ್ಷೆ ಆಕ್ರಮ ತಡೆಗೆ ʼಕೆಇಎʼ ಹೊಸ ಪ್ಲಾನ್..!

ಬೆಂಗಳೂರು: ರಾಜ್ಯ ಸರ್ಕಾರದಿಂದ ನಡೆಯುವ ವಿವಿಧ ಇಲಾಖೆ ಹಾಗೂ ನೇಮಕಾತಿ ಪರೀಕ್ಷೆಗಳಲ್ಲಿ ನಡೆಸಲಾಗುವ ಅಕ್ರಮವನ್ನು ತಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಹೊಸ ಸೂತ್ರವೊಂದನ್ನು ರಚಿಸಿದೆ. ಕೊಠಡಿಯಲ್ಲಿ ಎಷ್ಟು ಮಂದಿ ಪರೀಕ್ಷಾರ್ಥಿಗಳು ಇರುತ್ತಾರೋ ಅಷ್ಟು ಆವೃತ್ತಿಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸುವುದು ಸೂಕ್ತ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವರದಿಯನ್ನು ಸಲ್ಲಿಸಿದೆ.

ವಿವಿಧ ಹುದ್ದೆಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಸ್ ಡಿಎ ಹಾಗೂ ಎಫ್ ಡಿಎ ಪರೀಕ್ಷೆಯನ್ನು ಅ.28 ರಂದು ನಡೆಸಿತ್ತು. ಈ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಲಾಗಿತ್ತು. ಈ ಪ್ರಕರಣ ಸಂಬಂಧ ಕಿಂಗ್ ಪಿನ್ ಆಗಿದ್ದ ಆರ್. ಡಿ.ಪಾಟೀಲ್ ನನ್ನ ಬಂಧಿಸಲಾಗಿದೆ. ಈತ ಈ ಹಿಂದೆ ನಡೆದಿದ್ದ ಪಿಎಸ್ ಐ ಪರೀಕ್ಷೆಯಲ್ಲಿಯೂ ಅಕ್ರಮ ಎಸಗಿದ್ದ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಬಿಜೆಪಿಯ ಚುನಾವಣಾ ಪ್ರಚಾರ ವೀಕ್ಷಿಸಲು ವಿದೇಶಿ ರಾಜತಾಂತ್ರಿಕರು

ಮುಂದೆ ನಡೆಯುವ ಯಾವುದೇ ಸರ್ಕಾರಿ ಹುದ್ದೆಯಲ್ಲಿಯು ಅಕ್ರಮ ನಡೆಯಕೂಡದು ಎಂಬ ಕಾರಣದಿಂದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೊಸ ಪರೀಕ್ಷಾ ವಿಧಾನ ಸೂತ್ರವೊಂದನ್ನು ರಚಿಸಿ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ.

ಈ ವರದಿಯಲ್ಲಿ ಹಿಂದೆ ರಚಿಸಲಾಗುತ್ತಿದ್ದ ಪ್ರಶ್ನೆ ಪತ್ರಿಕೆಯನ್ನು 4 (ಎಬಿಸಿಡಿ) ಹಾಗೂ 16 (ಎಬಿಸಿಡಿಇಎಫ್ ಜಿಹೆಚ್) ಆವೃತ್ತಿಗಳಲ್ಲಿ ರಚಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಕೊಠಡಿಯಲ್ಲಿ ಎಷ್ಟು ಮಂದಿ ಪ್ರರೀಕ್ಷಾರ್ಥಿಗಳು ಇರುತ್ತಾರೋ ಅಷ್ಟು ಆವೃತ್ತಿಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ರಚಿಸುವಂತೆ ಇಲಾಖೆ ಯೋಜನೆ ರೂಪಿಸಿಕೊಂಡಿದೆ.

ಇದನ್ನೂ ಓದಿ: ದೀಪಾವಳಿಗೆ 3 ಕೋಟಿ ಮದ್ಯ ಬಾಟಲಿ ಮಾರಾಟ, ದೆಹಲಿ ಸರ್ಕಾರಕ್ಕೆ ₹525 ಕೋಟಿ ಆದಾಯ!

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles