ದೆಹಲಿ: ಪ್ರಧಾನಿ ನರೇಂದ್ರ ಮೋದಿ ಹುಲಿ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕಕ್ಕೆ ಭೇಟಿ ನೀಡಿದ್ದರು, ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮೋದಿ ಬಗ್ಗೆ ಪ್ರಶಂಸೆ ಮಾತುಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ದೇಶದಲ್ಲಿ ಪ್ರಾಣಿಗಳ ಸಂರಕ್ಷಣೆಗಾಗಿ ಅವರ ಪ್ರಯತ್ನ ತುಂಬಾ ದೊಡ್ಡದು, ಪ್ರಧಾನಿ ಮೋದಿ ಹೀರೋ ಎಂದು ಕೆವಿನ್ ಪೀಟರ್ಸನ್ ಹೊಗಳಿದ್ದಾರೆ.
ನಿಮ್ಮ ಜನ್ಮದಿನದಂದು ಮಧ್ಯಪ್ರದೇಶದಲ್ಲಿ ಚೀತಾಗಳನ್ನು ಬಿಡುಗಡೆ ಮಾಡಿದ್ರೀ, ಕೊರೊನಾ ಸಮಯದಲ್ಲಿ ನಿಮ್ಮ ದೃಢ ನಿರ್ಧಾರಗಳನ್ನು ಮರೆಯೋದಿಲ್ಲ ಈ ಸಂಕಷ್ಟ ಕಾಲದಲ್ಲಿ ಇತರ ದೇಶಗಳಿಗೆ ನೀಡಿದ ಸಹಾಯಕ್ಕೆ ಧನ್ಯವಾದಗಳು. ನಾನು ನಿಮ್ಮನ್ನು ಮತ್ತೆ ಭೇಟಿಯಾಗಲು ಉತ್ಸಾಹಕನಾಗಿದ್ದೇನೆ ಸರ್ ಎಂದು ಟ್ವಿಟರ್ ಹೇಳಿದ್ದಾರೆ.
2022ರಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ 3,167 ಆಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ಇತ್ತೀಚಿನ ಹುಲಿ ಗಣತಿ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.