ಬೆಂಗಳೂರು: ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಮಾತು ಕೇಳಿಬರುತ್ತಿದೆ, ನಟ ಕಿಚ್ಚ ಸುದೀಪ್ ರನ್ನು ರಾಜಕೀಯಕ್ಕೆ ಕರೆತರಲು ಒಂದಷ್ಟು ಪ್ರಯತ್ನಗಳು ಕೂಡ ನಡೆದಿವೆ. ಮೂಲಗಳ ಪ್ರಕಾರ ಬಿಜೆಪಿ ಜೊತೆ ಕೈ ಜೋಡಿಸಲಿದ್ದಾರೆ ಎಂದು ಹೇಳಲಾಗ್ತಿದೆ.
ಸುದೀಪ್ ನೇರವಾಗಿ ರಾಜಕೀಯಕ್ಕೆ ಧುಮುಕುತ್ತಾರೋ ಅಥವಾ ಕೇವಲ ಬಿಜೆಪಿ ಪರವಾಗಿ ಪ್ರಚಾರ ರಾಯಭಾರಿ ಆಗುತ್ತಾರೋ ಎಂಬುದು ಏಪ್ರಿಲ್ 5ರಂದು ಬಹಿರಂಗ ಆಗಲಿದೆ , ಈ ಕುರಿತು ಶೀಘ್ರದಲ್ಲೇ ಸ್ಪಷ್ಟ ಚಿತ್ರಣ ಸಿಗಲಿದೆ. ಮೂಲಗಳ ಮಾಹಿತಿ ಪ್ರಕಾರ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಜೊತೆ ಕಿಚ್ಚ ಸುದೀಪ್ ಮಾತುಕತೆ ನಡೆದಿದೆ, ಸುದೀಪ್ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಆತ್ಮೀಯರಿದ್ದಾರೆ.
ಇದಕ್ಕೂ ಮುನ್ನ ಚುನಾವಣೆಯಲ್ಲಿ ಅವರು ಪ್ರಚಾರ ಕೂಡಾ ಮಾಡಿದ್ದಾರೆ. ಈ ಬಾರಿಯಾದರೂ ಅವರು ರಾಜಕೀಯಕ್ಕೆ ಬರಬಹುದಾ ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಇನ್ನೂ ಸುದೀಪ್ ರಾಜಕೀಯಕ್ಕೆ ಬರಬಾರದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ರೆ ಇನ್ನೂ ಕೆಲವರು ಸುದೀಪ್ ರಾಜಕೀಯಕ್ಕೆ ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟೇ ಅಲ್ಲದೇ ಸುದೀಪ್ ಗೆ ರಾಜಕೀಯಕ್ಕಿಂತ ಜನರೇ ಮುಖ್ಯ ಎಂದು ನಟ ಸುದೀಪ್ ಹೇಳಿದ್ದರು‘ನಾನೊಬ್ಬ ಕಲಾವಿದ. 100 ಪರ್ಸೆಂಟ್ ಮಾತುಕತೆಗೆ ಬಂದಿದ್ದರು. ಇಲ್ಲ ಅಂತ ತೇಲಿಸೋಕೆ ಹೋಗಲ್ಲ. ಡಿಕೆ ಶಿವಕುಮಾರ್, ಸುಧಾಕರ್, ಬಸವರಾಜ ಬೊಮ್ಮಾಯಿ, ರಮ್ಯಾ ನನ್ನ ಸ್ನೇಹಿತರು. ನಾನು ಇನ್ನೂ ನಿರ್ಧಾರ ತಗೊಂಡಿಲ್ಲ. ಎರಡೂ ಕಡೆ ಆಪ್ತರು ಇರುವಾಗ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಆಗುತ್ತದೆ’ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಹೀಗಾಗಿ ಸುದೀಪ್ ವರು ರಾಜಕೀಯಕ್ಕೆ ಬರ್ತಾರ ಇಲ್ವಾ ಅನ್ನೋದು ಗೊತ್ತಾಗಬೇಕಿದೆ