ಬೆಂಗಳೂರು : ಮುನಿ ಗೆದ್ದರೆ ನಾನು ಗೆದ್ದಂಗೆ, ಅವರನ್ನು ಗೆಲ್ಲಿಸಬೇಕು. ಗೆದ್ದೇ ಗೆಲ್ಲುವೆವು ಒಂದು ದಿನ, ಗೆದ್ದೇ ಗೆಲ್ಲುತ್ತೆ ಒಳ್ಳೆತನ. ಮುನಿರತ್ನ ಗೆಲುವಿಗೆ ಅವರ ಕೆಲಸಗಳೇ ಕಾರಣ ಎಂದು ನಟ ಕಿಚ್ಚ ಸುದೀಪ್ ಹೇಳಿದರು.
ಬೆಂಗಳೂರಿನಲ್ಲಿ ಮುನಿರತ್ನ ಪರ ಪ್ರಚಾರ ಮಾಡಿ ಮಾತನಾಡಿ, ಮುನಿರತ್ನ ಪರ ಪ್ರಚಾರ ಖುಷಿಯಾಗಿದ್ದು, ಮುನಿ ಗೆಲ್ಲೋದು ಬೇರೆ ಅಲ್ಲಾ, ನಾನು ಗೆಲ್ಲೋದು ಬೇರೆ ಅಲ್ಲ, ಎರಡೂ ಒಂದೇ. ಮುನಿ ಗೆದ್ದರೆ ನಾನೇ ಗೆದ್ದಂಗೆ ಇಷ್ಟು ದಿನ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಮ ಜೊತೆಯಲ್ಲಿ ಕರ್ನಾಟಕ ಸುತ್ತಾಡಿದ್ದೆನು. ಈಗ ಬೆಂಗಳೂರಿನಲ್ಲಿಯೇ ಪ್ರಚಾರ ಮಾಡುತ್ತಿರುವುದಕ್ಕೆ ಭಾರಿ ಖುಷಿಯಾಗಿದೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಮುನಿರತ್ನ ಮಾತನಾಡಿ, ಕರ್ನಾಟಕದ ಆಸ್ತಿ ಸುದೀಪ್ ಕರ್ನಾಟಕದೆಲ್ಲೆಡೆ ಪ್ರಚಾರ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮೊದಲನೆಯದಾಗಿ ನನ್ನ ಕ್ಷೇತ್ರದಲ್ಲಿ ಮಾಡುತ್ತಿರುವುದು ಖುಷಿಯಾಗುತ್ತಿದೆ. 2013 ರಲ್ಲಿ 2 ಬಾರಿ ಪ್ರಚಾರ ಮಾಡಿದ್ದೇವೆ. ಕಳೆದ ಚುನಾವಣೆಗೂ ಸುದೀಪ್ ನನ್ನ ಜೊತೆಗಿದ್ದರು. ಈ ಬಾರಿ ಕೂಡ ಸುದೀಪ್ ನನ್ನ ಜೊತೆಯಲ್ಲೇ ಇದ್ದಾರೆ ಎಂದು ಹೇಳಿದರು.
ಬೊಮ್ಮಾಯಿ ಮಾಮ ಹೇಳಿದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಮಾಡುವುದಾಗಿ ನಟ ಕಿಚ್ಚ ಸುದೀಪ ಹೇಳಿದ್ದರು. ಅದರಂತೆ ಬಹಿರಂಗ ಪ್ರಚಾರದ ಕೊನೆಯ ದಿನ ಬೆಂಗಳೂರಿನಲ್ಲಿ ಮುನಿರತ್ನ ಪರವಾಗಿ ಪ್ರಚಾರ ಮಾಡಿದರು.