ಬೆಂಗಳೂರು: ನಾನು ಸಿಎಂ ಬೊಮ್ಮಾಯಿಯವರನ್ನು ಬೆಂಬಲಿಸುತ್ತೇನೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಿಎಂ ಬೊಮ್ಮಾಯಿ, ನಟ ಕಿಚ್ಚ ಸುದೀಪ್ ಮಾತನಾಡಿದ್ದು, ಸುದ್ದಿಗೋಷ್ಠಿಯ ಫೋಟೋಗಳನ್ನು ಸಿಎಂ ಬೊಮ್ಮಾಯಿಯವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಟ್ವೀಟ್ ಮಾಡಿ ಕಿಚ್ಚ ಸುದೀಪ್ ಗೆ ಧನ್ಯವಾದ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಮಾತನಾಡಿ, ನನ್ನ ಬದುಕಿನಲ್ಲಿ ಬೊಮ್ಮಾಯಿ ಮಾಮನಿಗೆ ಉನ್ನತ ಸ್ಥಾನ ಕೊಟ್ಟಿದ್ದೇನೆ, ನನ್ನ ಕಷ್ಟದಲ್ಲಿ ನೆರವಾಗಿದ್ದರು, ಹೀಗಾಗಿ ನಾನು ಪಕ್ಷ ಸೇರೋದಿಲ್ಲ, ಬೊಮ್ಮಾಯಿಯವರನ್ನು ಬೆಂಬಲಿಸುತ್ತೇನೆ, ಬೊಮ್ಮಾಯಿ ಯಾವುದೇ ಪಕ್ಷದಲ್ಲಿರ್ತಾ ಇದ್ರೂ ಅವರಿಗೆ ಸಪೋರ್ಟ್ ಮಾಡ್ತಿದ್ದೆ ಎಂದು ತಿಳಿಸಿದ್ದರು.