Friday, March 24, 2023
spot_img
- Advertisement -spot_img

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿಯಾಗ್ತಾರ ?

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಿಗೆ ಕಾಂಗ್ರೆಸ್ ಕಡೆಯಿಂದ ಆಫರ್ ಸಿಕ್ಕಿದೆ. ಸುದೀಪ್ ರಾಜಕೀಯ ರಂಗಕ್ಕೆ ಬರುವ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ನಟಿ ರಮ್ಯಾ ಮೂಲಕ ಸುದೀಪ್ ಅವರನ್ನ ಕಾಂಗ್ರೆಸ್ ನಾಯಕರು ಈಗಾಗಲೇ ಸಂಪರ್ಕಿಸಿದ್ದಾರೆ.

ಸಿನಿಮಾರಂಗದಲ್ಲಿ ಅಗ್ರ ಸ್ಥಾನದಲ್ಲಿರುವ ಸುದೀಪ್‌ಗೆ ಕಾಂಗ್ರೆಸ್ ಪಕ್ಷದ ಕಡೆಯಿಂದ ಬಂದಿರುವ ಆಫರ್ ಬಂದಿದೆ. ನಟಿ ರಮ್ಯಾ ಮೂಲಕ ಕಾಂಗ್ರೆಸ್ ನಾಯಕರು ಈಗಾಗಲೇ ನಟ ಸುದೀಪ್ ಜೊತೆ ಒಂದು ಹಂತದ ಮಾತುಕತೆ ನಡೆಸಿದ್ದಾರೆ. ಆದರೆ ತಮ್ಮ ನಿರ್ಧಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ಸುದೀಪ್ ಕಡೆಯಿಂದ ಬಂದಿಲ್ಲ.

ರಾಜಕೀಯ ಪ್ರವೇಶದ ಬಗ್ಗೆ ಸುದೀಪ್ ಕೂಡ ಮೌನ ವಹಿಸಿದ್ದಾರೆ.ಇತ್ತೀಚೆಗಷ್ಟೇ `ವಿಕ್ರಾಂತ್ ರೋಣ’ ಸಕ್ಸಸ್‌ನಲ್ಲಿದ್ದ ಸುದೀಪ್, ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆ ಮುಗಿಸಿ ಸ್ವಲ್ಪ ಫ್ರಿ ಆಗಿದ್ದಾರೆ. ಈ ಬೆನ್ನಲ್ಲೇ ಸುದೀಪ್‌ಗೆ ರಾಜಕೀಯ ರಂಗಕ್ಕೆ ಎಂಟ್ರಿ ಕೊಡಿ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಮಣೆ ಹಾಕ್ತಿದ್ದಾರೆ. ಆದರೆ ಸುದೀಪ್ ರಾಜಕೀಯ ಪ್ರವೇಶದ ಬಗ್ಗೆ ಇನ್ನು ಮಾತನಾಡಿಲ್ಲ.

ನಟ ಕಿಚ್ಚ ಸುದೀಪ್ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮೂಲಕ ಈಗಾಗಲೇ ಕಾಂಗ್ರೆಸ್ ಪಕ್ಷದ ನಾಯಕರು ಸುದೀಪ್ ಅವರ ಒಂದು ಹಂತದ ಮಾತುಕತೆ ನಡೆಸಿದ್ದಾರೆ. ಆದರೆ ಸುದೀಪ್ ರಾಜಕೀಯ ಪ್ರವೇಶದ ಬಗ್ಗೆ ಇನ್ನು ಮಾತನಾಡಿಲ್ಲ.

Related Articles

- Advertisement -

Latest Articles