ಬೆಂಗಳೂರು: ಕಳೆದ ವರ್ಷದಿಂದ ತಿರುಪತಿ ತಿರುಮಲ ದೇವಾಲಯದಲ್ಲಿ ನೀಡಲಾಗುವ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ರವಾನೆ ನಿಲ್ಲಿಸಲಾಗಿದೆ. ಆದರೆ ಕೆಎಂಎಫ್ (ಕರ್ನಾಟಕ ಮಿಲ್ಕ್ ಫೆಡರೇಷನ್) ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನಂ)ಗೆ ಪತ್ರ ಬರೆದಿದ್ದು, ತುಪ್ಪ ನೀಡಲು ಸಿದ್ಧರಿರುವುದಾಗಿ ತಿಳಿಸಿತ್ತು.
ಆದರೆ ಪತ್ರ ಬರೆದು ಸುಮಾರು 15 ದಿನಗಳು ಕಳೆದರು ಟಿಟಿಡಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ. ಕಾಂಪಿಟೇಟಿವ್ ದರದಲ್ಲಿ ತುಪ್ಪ ಪೂರೈಕೆ ಸಾಧ್ಯವಿಲ್ಲ ಎಂದು ಕೆಎಂಎಫ್ ಹೇಳಿದ್ದ ಬಳಿಕ ತುಪ್ಪ ಪೂರೈಕೆ ನಿಲ್ಲಿಸಲಾಗಿತ್ತು.
ಇದನ್ನೂ ಓದಿ: ಅನ್ನದಾತರ ವಿರೋಧಕ್ಕೆ ಕಿಮ್ಮತ್ತಿಲ್ಲ; ತಮಿಳುನಾಡಿಗೆ ಹರಿಯುತ್ತಲೇ ಇದೆ ಕಾವೇರಿ ನೀರು!
ಇದಾದ ಬಳಿಕ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಪತ್ರ ಬರೆದಿದ್ದು, ಟಿಟಿಡಿಗೆ ತುಪ್ಪ ಪೂರೈಸಲು ನಂದಿನಿ ಸಿದ್ದವಾಗಿದೆ, ದರ ನಿಗದಿಗೊಳಿಸಿ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕಿದೆ ಎಂದಿದ್ದರು. ಆದರೆ ಈ ಪತ್ರ ಬರೆದು 15 ದಿನ ಕಳೆದರೂ ಟಿಟಿಡಿಯಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದುಬಂದಿದೆ. ಟಿಟಿಡಿ ರಾಜ್ಯದ ನಂದಿನಿ ಉತ್ಪನ್ನ ಆಮದು ಕುರಿತು ಆಸಕ್ತಿ ತೋರುತ್ತಿಲ್ಲ ಎನ್ನಲಾಗ್ತಿದೆ.
KMF ಬರೆದ ಪತ್ರದಲ್ಲಿ ಏನಿತ್ತು?
ನಂದಿನಿ ಕರ್ನಾಟಕದ ಹೆಮ್ಮೆಯ ಬ್ರಾಂಡ್. ವರ್ಷದಿಂದ ವರ್ಷಕ್ಕೆ ಕೆಎಂಎಫ್ ಹೆಸರು ಬೆಳೆಯುತ್ತಲ್ಲೇ ಇದೆ. ದೇಶದ 2ನೇ ಅತೀದೊಡ್ಡ ಕೋ ಆಪರೇಟಿವ್ ಡೈರಿ ಇಂಡಸ್ಟ್ರೀ ಕೆಎಂಎಫ್. ದಕ್ಷಿಣದಲ್ಲಿ ರೂಲ್ ಮಾಡುತ್ತಿರುವ ಬ್ರಾಂಡ್ ಪ್ರತಿ ದಿನ 86 ಲಕ್ಷ ಲೀಟರ್‌ನಷ್ಟು ಹಾಲು ಉತ್ಪಾದನೆ ಮಾಡಲಾಗುತ್ತಿದೆ. ನಂದಿನಿಯ ಎಲ್ಲ ಉತ್ಪನ್ನಗಳನ್ನ ಬಹಳ ಹೈಜಿನ್ ನಲ್ಲಿ ತಯಾರಾಗುತ್ತವೆ. ರೈತರಿಗೆ ಸೇರಿರೋ ಸಂಸ್ಥೆಯಾಗಿದೆ. ಕೆಎಂಎಫ್ ಟ್ಯಾಂಕರ್ ಮತ್ತು ಟಿನ್ ಗಟ್ಟಲೆಯಷ್ಟು ತುಪ್ಪವನ್ನು ಟಿಟಿಡಿಗೆ ಸರಬರಾಜು ಮಾಡುತ್ತಿದೆ. ಟಿಟಿಡಿಯ ನಂಟು 20 ವರ್ಷಗಳಿಂದ ಸಾಗಿದೆ.
ಇದನ್ನೂ ಓದಿ: ಮಂಡ್ಯ; ಹೆದ್ದಾರಿಯಿಂದ ಸಂಜಯ್ ವೃತ್ತಕ್ಕೆ ಶಿಫ್ಟ್ ಆಗಿದ್ಯಾಕೆ ಬಿಜೆಪಿ ಪ್ರತಿಭಟನೆ?
ಶುದ್ಧ ಹಸುವಿನ ಹಾಲಿನಿಂದಲೇ ಮಾಡುವ ತುಪ್ಪ ಲಡ್ಡು ತಯಾರಿಕೆಗೆ ಹೇಳಿ ಮಾಡಿದಂತಿದೆ. ನಂದಿನಿ ತುಪ್ಪ ಸುವಾಸನೆ ಹಾಗೂ ರುಚಿಗೆ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಂಪಿಟೇಟಿವ್ ಬಿಡ್ಡಿಗ್ ಕಾರಣ ಕೆಎಂಎಫ್ ಟಿಟಿಡಿಗೆ ತುಪ್ಪ ಸರಬರಾಜು ಮಾಡಲು ಸಾಧ್ಯವಾಗಲಿಲ್ಲ. ಕೆಎಂಎಫ್ ರೈತರ ಸಂಸ್ಥೆಯಾಗಿರೋ ಕಾರಣ ಟೆಂಡರ್‌ನಲ್ಲಿ ಭಾಗವಹಿಸುವುದು ಕೂಡಾ ಕಷ್ಟ. ತುಪ್ಪ ಉತ್ಪಾದನೆಯ ಖರ್ಚುವೆಚ್ಚ ಸರಿದೂಗಿಸಲು ಕಷ್ಟ ಸಾಧ್ಯ. ಆದರೆ ಟಿಟಿಡಿಗೆ ತುಪ್ಪ ಸರಬರಾಜು ನಿಲ್ಲಿಸಿರುವ ವಿಚಾರ ಮಾಧ್ಯಮದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ. ಈ ವಿಚಾರವನ್ನ ಮುಂದಿಟ್ಟುಕೊಂಡು ರಾಜಕೀಯ ನಾಯಕರು ವಿಭಿನ್ನ ಹೇಳಿಕೆಗಳನ್ನ ಕೊಡ್ತಿದ್ದಾರೆ. ಹೀಗಾಗಿ ನಾವು ನಿಮ್ಮ ಗಮನಕ್ಕೆ ಈ ವಿಚಾರ ತರಲು ಬಯಸುತ್ತೇವೆ.
ಪ್ರಸ್ತುತ ನಾವು 30 ಸಾವಿರ ಮೆಟ್ರಿಕ್ ಟನ್ ತುಪ್ಪವನ್ನು ಉತ್ಪಾದನೆ ಮಾಡುತ್ತಿದ್ದೇವೆ. ಶ್ರೀ ವೆಂಕಟೇಶ್ವರ ಸ್ವಾಮಿಯ ಲಡ್ಡು ಪ್ರಸಾದ ತಯಾರಿಕೆಗೆ ನಾವೇ ತುಪ್ಪ ಸರಬರಾಜು ಮಾಡಲು ಸಂತಸ ಪಡುತ್ತೇವೆ. ಇದು ಶ್ರೀ ವೆಂಕಟೇಶ್ವರ ದೇವರಿಗೆ ತೋರಿಸುವ ಭಕ್ತಿಯಾಗಿದೆ. ಈ ಹಿನ್ನೆಲೆ ಒಂದು ದಿನ ನಿಗದಿ ಮಾಡಿ ಈ ಕುರಿತು ಸಭೆ ನಡೆಸಲು ನಾವು ತಯಾರಿದ್ದೇವೆ. ದಿನಾಂಕ ನಿಗದಿ ಮಾಡಿ ದರದ ಬಗ್ಗೆ ಪರಸ್ಪರ ಮಾತುಕತೆ ನಡೆಸೋಣ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.