ಹುಬ್ಬಳ್ಳಿ: ಕಾಂಗ್ರೆಸ್ ಜನರಿಗೆ ನೀಡಿದ್ದ 5 ಗ್ಯಾರಂಟಿಗಳನ್ನು ತಕ್ಷಣ ಈಡೇರಿಸಬೇಕು, ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕಾಂಗ್ರೆಸ್ ಶಾಸಕ ಕೋನರೆಡ್ಡಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿ, ಡಿಸಿಎಂ ಸಭೆಯಲ್ಲಿ ನಾನು ಕೂಡ ಪಾಲ್ಗೊಂಡಿದ್ದೆ. ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೀವಿ ಎಂದಿದ್ದಾರೆ. ಒಂದುವೇಳೆ ಜಾರಿ ಮಾಡದಿದ್ರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಹೇಳಿದ್ದಾರೆ.
ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ, ಮೊದಲ ಸಂಪುಟ ಸಭೆಯಲ್ಲಿಯೇ ಅನುಮೋದನೆ ಪಡೆಯುತ್ತೇವೆ ಎಂದವರು ಹಲವು ದಿನಗಳು ಕಳೆದರೂ ಇನ್ನೂ ಜಾರಿಗೆ ತಂದಿಲ್ಲ ಎಂದು ವಿರೋಧ ಪಕ್ಷದ ನಾಯಕರು ಸಾರ್ವಜನಿಕರು ಟೀಕಿಸುತ್ತಿದ್ದಾರೆ. ಇನ್ನು ಹಲವು ಕಡೆಗಳಲ್ಲಿ ಜನರು ಕರೆಂಟ್ ಬಿಲ್ ಕಟ್ಟುವುದಿಲ್ಲ, ಬಸ್ಸಿನಲ್ಲಿ ಮಹಿಳೆಯರು ಟಿಕೆಟ್ ಗೆ ಹಣ ಕೊಡುವುದಿಲ್ಲ ಎಂದು ಹಠಹಿಡಿಯುತ್ತಿದ್ದಾರೆ.
ನಮ್ಮ ಸರ್ಕಾರ ಇವಾಗ ರಚನೆ ಆಗಿದೆ. ಅದಕ್ಕೊಂದು ಕಾಲಾವಕಾಶ ಬೇಕು, ಅಂಕಿ ಅಂಶ ಬೇಕು. ಕೊಟ್ಟ ಗ್ಯಾರಂಟಿಯನ್ನು 100 ಕ್ಕೆ 100 ಜಾರಿ ಮಾಡ್ತೀವಿ. ಗ್ಯಾರಂಟಿ ಬಗ್ಗೆ ನಾನು ಗ್ಯಾರಂಟಿ ಎಂದು ಭರವಸೆ ಕೊಟ್ಟಿದ್ದಾರೆ.