Thursday, September 28, 2023
spot_img
- Advertisement -spot_img

‘ಭಾರತ ಮಂಟಪ’ದಲ್ಲಿ ಗಮನ ಸೆಳೆದ ಕೋನಾರ್ಕ್ ಚಕ್ರ; ಏನಿದು ಗೊತ್ತಾ?

ನವದೆಹಲಿ: ನಗರದಲ್ಲಿ ಆಯೋಜನೆಗೊಂಡಿರುವ ಜಿ-20 ಶೃಂಗಸಭೆ ಹಿನ್ನೆಲೆ ಹಲವು ಗಣ್ಯರು ಭಾರತಕ್ಕೆ ಬಂದಿಳಿದಿದ್ದಾರೆ. ಪ್ರಧಾನಿ ಮೋದಿ ಅವರನ್ನು ಸಭೆಗೆ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಆದರೆ ಈ ಅಗ್ರಗಣ್ಯರ ಸ್ವಾಗತದ ವೇಳೆ ಕೊನಾರ್ಕ್‌ ಚಕ್ರ ಎಲ್ಲರ ಗಮನಸೆಳೆದಿದೆ.

ಪ್ರಧಾನಿ ಮೋದಿ ಗಣ್ಯರ ಸ್ವಾಗತಿಸುವ ವೇಳೆ ಹಿಂಬದಿಯಲ್ಲಿ ಕೋನಾರ್ಕ್ ಚಕ್ರದ ಚಿತ್ರವಿರುವುದು ಎಲ್ಲರ ಗಮನ ಸೆಳೆದಿದೆ. ಒಡಿಶಾದ ಪುರಿಯಲ್ಲಿರುವ ಸೂರ್ಯ ದೇವಾಲಯದ ಕೋನಾರ್ಕ್ ಚಕ್ರ ಪ್ರತಿಕೃತಿಯು ಭಾರತ್ ಮಂಟಪದಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: Chandrababu Naidu Arrested : ಚಂದ್ರಬಾಬು ನಾಯ್ಡು ಅರೆಸ್ಟ್ : ಏನಿದು ₹ 371 ಕೋಟಿ ಹಗರಣ ಕೇಸ್‌?

ಕೋನಾರ್ಕ್ ಚಕ್ರವನ್ನು 13ನೇ ಶತಮಾನದಲ್ಲಿ ರಾಜ ನರಸಿಂಹದೇವ-I ರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ತ್ರಿವರ್ಣ ಧ್ವಜದಲ್ಲಿರುವ 24 ಗೆರೆಗಳ ಅಶೋಕ ಚಕ್ರದಂತೆ ಹೊಂದಿರುವ ಈ ಚಕ್ರವು ಭಾರತದ ಪ್ರಾಚೀನ ಕ್ರಿಯಾಶೀಲತೆ, ಮುಂದುವರಿದ ನಾಗರಿಕತೆ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ಒಳಗೊಂಡಿದೆ. ಅದರ ತಿರುಗುವ ಚಲನೆಯು ಸಮಯ, ‘ಕಾಲಚಕ್ರ’, ಹಾಗೆಯೇ ಪ್ರಗತಿ ಮತ್ತು ನಿರಂತರ ಬದಲಾವಣೆಯನ್ನು ಸಂಕೇತಿಸುತ್ತದೆ.

ಇದು ಪ್ರಜಾಪ್ರಭುತ್ವ ಚಕ್ರದ ಪ್ರಬಲ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ, ಪ್ರಜಾಪ್ರಭುತ್ವದ ಆದರ್ಶಗಳ ಸ್ಥಿತಿಸ್ಥಾಪಕತ್ವ ಮತ್ತು ಸಮಾಜದಲ್ಲಿ ಪ್ರಗತಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ಜಿ20 ಶೃಂಗಸಭೆಯ ಭಾರತ್ ಮಂಟಪದಲ್ಲಿ ಈ ಚಕ್ರ ಪ್ರಮುಖ ಪಾತ್ರ ವಹಿಸಿದೆ.

ಇದನ್ನೂ ಓದಿ: ಶೃಂಗಸಭೆ ಔತಣಕೂಟಕ್ಕೆ 6 ರಾಜ್ಯಗಳ ಸಿಎಂ, ಇಬ್ಬರು ಮಾಜಿ ಪ್ರಧಾನಿಗಳು ಗೈರು!

ಅಚ್ಚರಿ ಎಂದರೆ ಈ ಚಕ್ರದ ಕುರಿತು ಯುಎಸ್ ಅಧ್ಯಕ್ಷ ಜೋ ಬೈಡೆನ್ ಪ್ರಧಾನಿ ಮೋದಿ ಅವರ ಬಳಿ ವಿಚಾರಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಬೈಡೆನ್‌ಗೆ ಕೋನಾರ್ಕ್ ಚಕ್ರದ ಇತಿಹಾಸ ಹಾಗೂ ಪ್ರಸ್ತುತತೆಯ ಕುರಿತು ವಿವರಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles